ಹೈದರಾಬಾದ್: ನಡುರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಆಟೋವೊಂದು ವ್ಯಕ್ತಿಯೊಬ್ಬನಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಷಂಶೇರ್ ಗಂಜ್ ನಲ್ಲಿ 48 ವರ್ಷದ ಪ್ರಾಯದ ಜಂಗಯ್ಯ ಎಂಬ ಕೂಲಿ ಕಾರ್ಮಿಕ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಆಟೋ ಆತನಿಗೆ ಡಿಕ್ಕಿ ಹೊಡೆದಿದ್ದು ಅಲ್ಲದೆ ಆತನ ಎದೆಯ ಮೇಲೆ ಬಿದ್ದಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಭೀಕರ ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.