ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಪುಟ ಮಂಗಳವಾರ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ(ಐಐಎಮ್) ಮಸೂದೆ-2017ಕ್ಕೆ ಒಪ್ಪಿಗೆ ನೀಡಿದ್ದು, ಇದರಡಿಯಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನು ರಾಷ್ಟ್ರದ ಪ್ರಾಮುಖ್ಯದ ಸಂಸ್ಥೆಗಳು ಎಂದು ಘೋಷಿಸಲಾಗುತ್ತದೆ.
ಸಮಿತಿ ಅನುಮೋದಿಸಿದ ಮಸೂದೆಯಲ್ಲಿ, ಐಐಎಮ್ ಗಳು ತಮ್ಮ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರದಾನ ಮಾಡಬಹುದಾಗಿದ್ದು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದುತ್ತವೆ ಮತ್ತು ಅದರೊಟ್ಟಿಗೆ ಸರಿಯಾದ ನಿಖರತೆಯನ್ನು ಪಡೆಯುತ್ತವೆ.
ಇದರ ಹೊರತಾಗಿ, ಸಂಸ್ಥೆಯ ಆಡಳಿತ ಮಂಡಳಿಯಾಗಲಿದ್ದು ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಮಂಡಳಿಯು ಆಯ್ಕೆ ಮಾಡುತ್ತದೆ.
ಸ್ವತಂತ್ರ ಶಾಖೆಗಳು ಸಂಸ್ಥೆಗಳ ಸಾಧನೆಗಳನ್ನು ಕಾಲಕಾಲಕ್ಕೆ ಪರಾಮರ್ಶಿಸಲಿದ್ದು, ಸಂಸತ್ತು ಮತ್ತು ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರು ಸಂಸ್ಥೆಯ ವಾರ್ಷಿಕ ವರದಿಗಳನ್ನು ಲೆಕ್ಕಮಾಡುತ್ತದೆ.
ಈ ಹಿಂದೆ ಐಐಎಮ್ ಗಳಿಗೆ ಪದವಿ ಪ್ರದಾನ ಮಾಡುವ ಅಧಿಕಾರವಿರಲಿಲ್ಲ. ಹಾಗಾಗಿ ಅವುಗಳು ಸ್ನಾತಕೋತ್ತರ ಡಿಪ್ಲೊಮಾ ಮತ್ತು ಮ್ಯಾನೇಜ್ ಮೆಂಟ್ ನಲ್ಲಿ ಫೆಲೊ ಪ್ರೊಗ್ರೆಮ್ ನ್ನು ನೀಡುತ್ತಿದ್ದರು. ಈ ಪದವಿಗಳನ್ನು ಎಂಬಿಎ ಮತ್ತು ಪಿ.ಎಚ್ ಡಿಗಳಿಗೆ ಸಮನಾದವು ಎಂದು ಪರಿಗಣಿಸಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics