ದೇಶ

ವಿನಯ್ ಕಟಿಯಾರ್ 'ಸೆಕ್ಸಿಸ್ಟ್' ಹೇಳಿಕೆ ಬಿಜೆಪಿಯ ಮನಸ್ಥಿತಿ ತೋರಿಸಿದೆ: ಪ್ರಿಯಾಂಕಾ ಗಾಂಧಿ

Lingaraj Badiger
ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು ರಾಜಕಾರಣಿಗಳ ಹೇಳಿಕೆಗಳು ಹೊಸ ವಿವಾದಗಳನ್ನು ಹುಟ್ಟು ಹಾಕುತ್ತಿವೆ.
ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ವಿನಯ್‌ ಕಟಿಯಾರ್‌ ಅವರ ಸೆಕ್ಸಿಸ್ಟ್ ಹೇಳಿಕೆ ಬಗ್ಗೆ ನಗುತ್ತಲೇ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಅವರ ಹೇಳಿಕೆ ಮಹಿಳೆಯರ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸಿದೆ ಎಂದಿದ್ದಾರೆ.
ಕಟಿಯಾರ್ ಅವರ ಹೇಳಿಕೆ ಭಾರತೀಯರ ಧರ್ಮ ಪತ್ನಿಯರ ಬಗೆಗಿನ ಬಿಜೆಪಿಯ ಮನಸ್ಥಿತಿಯನ್ನು ತೋರಿಸಿದೆ ಎಂದು ಪ್ರಿಯಾಂಕಾ ಗಾಂಧಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಮ್ಮ ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿಗಿಂತ ಸುಂದರ ಮಹಿಳಾ ಪ್ರಚಾರಕರಿದ್ದಾರೆ ಎಂದು ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಕಟಿಯಾರ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿನಯ್ ಕಟಿಯಾರ್ ಸೆಕ್ಸಿಸ್ಟ್ ಹೇಳಿಕೆ ಕುರಿತಂತೆ ಬಹುಜನ್ ಸಮಾಜ ಪಕ್ಷ(ಬಿಎಸ್ಪಿ) ಕಿಡಿಕಾರಿದ್ದು, ಈ ಕೂಡಲೇ ಕಟಿಯಾರ್ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದೆ.
SCROLL FOR NEXT