ನವದೆಹಲಿ: ರಾಜಧಾನಿಯ ದೆಹಲಿಯ ವಸಂತ್ ಕುಂಜ್ ಪ್ರದೇಶದ ಸಮೀಪದ ಕಿಷನ್ ಗರ್ಹ ಗ್ರಾಮದಲ್ಲಿ ಸಜೀವ ಮಾರ್ಟರ್ ಶೆಲ್ ವೊಂದು ಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ.
ವಸಂತ ಕುಂಜ್ ಪೊಲೀಸ್ ಠಾಣೆಯ ಪೊಲೀಸರ ತಂಡದೊಂದಿಗೆ ಪರಿಶೀಲನೆ ನಡೆಸಿದಾದ ಕಿಷನ್ ಗರ್ಹ ಗ್ರಾಮದ ಕಸದ ತೊಟ್ಟಿಯೊಂದರಲ್ಲಿ ಮಾರ್ಟರ್ ಶೆಲ್ ಇರುವುದು ಪತ್ತೆಯಾಗಿದೆ.
ಕೂಡಲೇ ಸ್ಥಳಕ್ಕೆ ಬಂದ ರಾಷ್ಟ್ರೀಯ ಭದ್ರತಾ ಪಡೆಗಳು ಬಾಂಬ್ ನಿಷ್ಕ್ರಿಯಗೊಳಿಸಲು ಮುಂದಾಗಿದ್ದಾರೆ. ಪ್ರಸ್ತುತ ಸುತ್ತಮುತ್ತಲಿನ ನಿವಾಸಿಗಳನ್ನು ತೆರವುಗೊಳಿಸಲಾಗಿದ್ದು, ಸ್ಥಳದಲ್ಲಿ ಜನರ ಚಲನವಲನವನ್ನು ನಿರ್ಬಂಧಿಸಲಾಗಿದೆ.