ಮುಂಬೈ; ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಅಂತ್ಯಗೊಳಿಸಿರುವ ಶಿವಸೇನೆ, ಇದೀಗ ಬಿಜೆಪಿ ವಿರುದ್ಧ ಕೆಂಡ ಕಾರಲು ಆರಂಭಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸುತ್ತಲೂ ಶಕುನಿಗಳನ್ನು ಇಟ್ಟುಕೊಂಡಿದ್ದಾರೆಂದು ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಪಕ್ಷದಲ್ಲಿ ಅತ್ಯಾಚಾರಿಗಳು, ಕೊಲೆಗಾರರು, ಕಳ್ಳರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದರೂ, ನಮ್ಮ ಮಹಾರಾಷ್ಟ್ರ ಸಂಸ್ಕೃತಿಯನ್ನು ರಕ್ಷಣೆ ಮಾಡುತ್ತಿದ್ದು. ಬಿಜೆಪಿ ತನ್ನ ಪಕ್ಷದಲ್ಲಿ 2000 ಸ್ಥಾನವನ್ನು ಗೂಂಡಾಗಳಿಗೇ ನೀಡಿತ್ತು. ಬಿಜೆಪಿ ಹಾಗೂ ಸಮಾಜವಾದಿ ಪಕ್ಷಕ್ಕೂ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಹೇಳಿದ್ದಾರೆ.
ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ರಾಮ ಮಂದಿರ ದೇಗುಲ ನೆನಪಿಗೆ ಬರುತ್ತದೆ. ಹೀಗಾಗಿಯೇ ಚುನಾವಣಾ ಸಂದರ್ಭದಲ್ಲಿ ರಾಮ ಮಂದಿರ ವಿಚಾರವನ್ನು ತೆಗೆದುಕೊಳ್ಳುತ್ತದೆ. ಲೋಕಸಭಾ ಚುನಾವಣೆಯಲ್ಲಿ 280 ಸ್ಥಾನವನ್ನೂ ಬಿಜೆಪಿ ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಗೆಲವು ಬೇಕಿದ್ದೇ ಆದರೆ, ರಾಮ ಮಂದಿರವನ್ನು ಈಗಲೇ ನಿರ್ಮಾಣ ಮಾಡಬೇಕಿದೆ. ಬಿಜೆಪಿ ಮತ್ತೆ ಎರಡವೇ ಅವಕಾಶ ದೊರಕುವುದಿಲ್ಲ. ಚುನಾವಣೆ ಬಂದಾಗ ಮಾತ್ರವೇ ಬಿಜೆಪಿ ರಾಮ ಮಂದಿರವೇಕೆ ನೆನಪಾಗುತ್ತದೆ. ಚುನಾವಣೆ ಮುಗಿದ ಬಳಿಕ ರಾಮನನ್ನು ಮತ್ತೆ ಅಜ್ಞಾತವಾಸಕ್ಕೆ ಕಳುಹಿಸುತ್ತಾರೆಂದು ತಿಳಿಸಿದ್ದಾರೆ.