ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಲವಲವಿಕೆ ಮನಸ್ಥಿತಿ ಉತ್ತಮ ಅಂಕ ಪಡೆಯುವ ರಹಸ್ಯ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

ಪರೀಕ್ಷೆಗಳು ಹಬ್ಬವಿದ್ದಂತೆ. ಅದನ್ನು ಸಂತೋಷವಾಗಿ ಸ್ವೀಕರಿಸಬೇಕೇ ವಿನಃ ಒತ್ತಡವೆಂದು ಭಾವಿಸಬಾರದು. ಲವಲವಿಕೆ ಮನಸ್ಥಿತಿ ಉತ್ತಮ ಅಂಕ ಪಡೆಯುವ ರಹಸ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗೆ ಭಾನುವಾರ ಕಿವಿಮಾತು ಹೇಳಿದ್ದಾರೆ...

ನವದೆಹಲಿ: ಪರೀಕ್ಷೆಗಳು ಹಬ್ಬವಿದ್ದಂತೆ. ಅದನ್ನು ಸಂತೋಷವಾಗಿ ಸ್ವೀಕರಿಸಬೇಕೇ ವಿನಃ ಒತ್ತಡವೆಂದು ಭಾವಿಸಬಾರದು. ಲವಲವಿಕೆ ಮನಸ್ಥಿತಿ ಉತ್ತಮ ಅಂಕ ಪಡೆಯುವ ರಹಸ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗೆ ಭಾನುವಾರ ಕಿವಿಮಾತು ಹೇಳಿದ್ದಾರೆ.

ಈ ಕುರಿತಂತೆ ರೇಡಿಯೋ ಕಾರ್ಯಕ್ರಮದ 28ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಪರೀಕ್ಷೆಗಳು ಹಬ್ಬವಿದ್ದಂತೆ. ಅವುಗಳನ್ನು ಸಂತೋಷದಿಂದ ಆಹ್ವಾನಿಸಬೇಕೇ ಹೊರತು ಒತ್ತಡವೆಂದು ತಿಳಿಯಬಾರದು. ಇಂತಹ ಸಮಯದಲ್ಲಿ ಪೋಷಕರು ಮನೆಯಲ್ಲಿ ಹಬ್ಬದ ವಾತಾವರಣವನ್ನು ನಿರ್ಮಾಣಮಾಡಬೇಕಿದೆ. ಹೆಚ್ಚು ಸಂತೋಷದಿಂದ ಇದ್ದಷ್ಟೂ, ಅಂಕಗಳನ್ನು ಹೆಚ್ಚಾಗಿ ಪಡೆಯಬಹುದು ಎಂದು ಹೇಳಿದ್ದಾರೆ.

ಜನವರಿ 30 ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ದಿನವಾಗಿದ್ದು, ಇದೇ ದಿನವನ್ನು ಪ್ರತೀವರ್ಷ ಹುತಾತ್ಮರ ದಿನವಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದೆ. ಹುತಾತ್ಮ ವೀರ ಯೋಧರಿಗಾಗಿ 2 ನಿಮಿಷ ಕಾಲ ಮೌನವಹಿಸಿ ಶ್ರದ್ಧಾಂಜಲಿ ಅರ್ಪಿಸುವಂತೆ ದೇಶದ ಜನತೆಗೆ ತಿಳಿಸಿದರು.

ನಂತರ ಮಾತನಾಡಿದ ಅವರು, ಇಂದಿನ ಯುವಕರು ದೇಶಕ್ಕಾಗಿ ಗಡಿ ಕಾಯುವ ಯೋಧರ ಬಗ್ಗೆ ಸಂಶೋಧನೆಗಳನ್ನು ನಡೆಸಬೇಕಿದೆ ಎಂದರು. ಅಲ್ಲದೆ ಇದೇ ವೇಳೆ ಗಣರಾಜ್ಯೋತ್ಸವ ದಿನದಂದು ಶೌರ್ಯ ಪ್ರಶಸ್ತಿ ಪಡೆದ ಯೋಧರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಬಳಿಕ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ ಅವರು, ಪರೀಕ್ಷೆಗಳು ಹಬ್ಬವಿದ್ದಂತೆ. ಅವುಗಳನ್ನು ಸಂತೋಷದಿಂದ ಆಹ್ವಾನಿಸಬೇಕೇ ಹೊರತು ಒತ್ತಡವೆಂದು ತಿಳಿಯಬಾರದು. ಪರೀಕ್ಷೆ ವೇಳೆ ಗಾಬರಿಗೊಳ್ಳದೆ ಆರಾಮವಾಗಿರಬೇಕು. ಈ ವೇಳೆ ಓದಿದ್ದನ್ನು ನಿಧಾನಗತಿಯಲ್ಲಿ ನೆನಪಿಸಿಕೊಳ್ಳುತ್ತಾ ಹೋದರೆ, ಹೆಚ್ಚುಗಳನ್ನು ಗಳಿಸಬರುದು. ಆರಾಮಕರವಾಗಿರುವುದೇ ಜ್ಞಾಪಕ ಶಕ್ತಿ ಉತ್ತಮವಾದ ಔಷಧಿಯಾಗಿದೆ ಎಂದು ಹೇಳಿದ್ದಾರೆ.

ಕೇವಲ ಒಂದು ವರ್ಷಕ್ಕಷ್ಟೇ ನೀವು ಪರೀಕ್ಷೆಯನ್ನು ಬರೆಯುತ್ತೀರಿ. ಸಂಪೂರ್ಣ ಜೀವನಪೂರ್ತಿ ಕುರಿತಾಗಿ ಅಲ್ಲ. ಜೀವನದ ಯಶಸ್ಸಿಗೆ ಪರೀಕ್ಷೆಗಳು ಮಾನದಂಡವಲ್ಲ. ಅಂಕ ಪಡೆದ ನಂತರ ಸುಮ್ಮನೆ ಕೂರ ಬಾರದು. ಮತ್ತಷ್ಟು ಜ್ಞಾನವನ್ನು ಸಂಪಾದನೆ ಮಾಡುತ್ತಾ ಹೋಗಬೇಕು. ನಿಮ್ಮ ಧ್ಯೇಯ ಹಾಗೂ ಆಕಾಂಕ್ಷೆಗಳು ಕೊಂಡಿಯಾಗಿ ಕುಳಿತುಬಿಟ್ಟದೆ. ಅಂಕಗಳೇ ನಿಮ್ಮನ್ನು ಹಿಂಬಾಲಿಸುತ್ತವೆ. ಮತ್ತೊಬ್ಬರೊಂದಿಗೆ ಸ್ಪರ್ಧಿಸುವ ಬದಲು, ನಿಮ್ಮೊಂದಿಗೆ ನೀವೇ ಸ್ಪರ್ಥಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಉದಾಹರಣೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ನೋಡಿ. ಸಚಿನ್ 20 ವರ್ಷಗಳಿಂದ ಅವರ ದಾಖಲೆಗಳನ್ನು ಅವರೇ ಮುರಿದಿದ್ದರು. ಹೀಗಾಗಿಯೇ ಅವರು ಎಂದಿಗೂ ಅತ್ಯುತ್ತಮ ಆಟಗಾರರಾಗಿದ್ದರು.

ಎಪಿಜೆ ಅಬ್ದುಲ್ ಕಲಾಂ ಅವರೂ ಕೂಡ ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು. ಪೈಲಟ್ ಆಗುವ ಅವರ ಕನಸು ನನಸಾಗಲಿಲ್ಲ. ಆದರೂ, ತಮ್ಮ ಛಲವನ್ನು ಬಿಡದೆ ಯಶಸ್ವಿ ವಿಜ್ಞಾನಿಯಾದರು.

ಸಮಾಜದಲ್ಲಿ ಮಕ್ಕಳು ಸಲಹೆ ಕೂಡ ಭಾಗವಾಗಿದ್ದು, ಅವರು ಹೇಗೇ ಇದ್ದರೂ ಅವರನ್ನು ಒಪ್ಪಿಕೊಳ್ಳಬೇಕಿದೆ. ಪೋಷಕರು ಮಕ್ಕಳಿಗೆ ಮನೆಗಳಲ್ಲಿ ಸಂತಸಕರ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. ಆತ್ಮವಿಶ್ವಾಸದಲ್ಲಿ ಕೊರತೆ ಕಂಡುಬಂದರೆ, ಇದು ಕೆಟ್ಟ ರೀತಿಯ ಪರಿಣಾಮಗಳನ್ನು ಬೀರಲಿದೆ.

ಕೆಲ ಜನರು ಹೇಗೆ ಮೋಸ ಮಾಡಬೇಕೆಂಬುದರ ಬಗ್ಗೆಯ ಯಾವಾಗಲೂ ಚಿಂತನೆ ನಡೆಸುತ್ತಿರುತ್ತಾರೆ. ಪೋಷಕರೇ ಮೋಸ ಮಾಡುವ ಆಲೋಚನೆಗಳನ್ನು ಇಟ್ಟುಕೊಂಡಿದ್ದರೆ, ಮಕ್ಕಳಿಗೆ ಅವರೇನು ಹೇಳಿಕೊಡುತ್ತಾರೆ. ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಬೇಕಿದೆ. ಸೂಕ್ತ ರೀತಿಯ ವಿಶ್ರಾಂತಿ, ಸರಿಯಾದ ರೀತಿಯ ನಿದ್ರೆ, ದೈಹಿಕ ಚಟುವಟಿಕೆ ಈ ಮೂರು ನನ್ನ ಪ್ರಕಾರ ಪರೀಕ್ಷಾ ಸಮಯದಲ್ಲಿ ಅತ್ಯಗತ್ಯವಾಗಿರಬೇಕು. ಓದುವಾಗ ಕೆಲ ಸಮಯ ವಿಶ್ರಾಂತಿ ಪಡೆಯಿತು. ಇದು ನಿಮ್ಮ ಏಕಾಗ್ರತೆಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 1 ರಂದು ಭಾರತೀಯ ಕರಾವಳಿ ಪಡೆ 40 ವರ್ಷಾಚರಣೆಯನ್ನು ಆಚರಿಸುತ್ತಿದ್ದು, ವೀರ ಹಾಗೂ ಶೂರ ಪಡೆಗಳಿಗೆ ಈ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT