ಅಮೃತಸರ: ಭಾರತ-ಪಾಕಿಸ್ತಾನ ಗಡಿಯಲ್ಲಿ ನಾಲ್ಕು ಕೆಜಿ ಹೆರಾಯಿನ್ ಮಾದಕ ದ್ರವ್ಯವನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದು ಅತ್ತಾರಿ-ವಾಘಾ ಗಡಿ ಸಮೀಪ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಬಿಎಸ್ಎಫ್ ಡಿಐಜಿ ಆರ್ ಕೆ ಕಟಾರಿಯಾ ತಿಳಿಸಿದ್ದಾರೆ.
ಗಡಿಯ ಬೇಲಿಯ ಆಚೆಯಿಂದ ಯಾವುದೇ ಶಬ್ಧ ಕೇಳುತ್ತಿದ್ದಂತೆ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ಯೋಧರು ಜಾಗೃತರಾಗಿ ವಿಶೇಷ ಶೋಧ ಕಾರ್ಯಾಚರಣೆ ನಡೆಸಿದರು. ಆಗ ಒಂದು ಕೆಜಿ ತೂಕದ ನಾಲ್ಕು ಹೆರಾಯಿನ್ ಪೊಟ್ಟಣಗಳು ಬಿದ್ದಿರುವುದನ್ನು ಕಂಡು ಒಡನೆಯೇ ಅವುಗಳನ್ನು ಯೋಧರು ವಶಪಡಿಸಿಕೊಂಡರು ಎಂದು ಕಟಾರಿಯಾ ತಿಳಿಸಿದ್ದಾರೆ.