ಮೃತ ಮಗು ಧರಣಿ 
ದೇಶ

ಪೋಲಿಯೊ ಲಸಿಕೆ ಹಾಕಿಸಿದ ಗಂಟೆಯೊಳಗೆ 5 ತಿಂಗಳ ಮಗು ಸಾವು

ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿದ ಒಂದು ಗಂಟೆಯೊಳಗೆ 5 ತಿಂಗಳ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ..

ವಿಝಿನಗರಮ್: ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿದ ಒಂದು ಗಂಟೆಯೊಳಗೆ 5 ತಿಂಗಳ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪುಷ್ಪಾಪತಿಪಲೇಮ್ ನಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುವ ಗೆಟ್ಟಯ್ಯ ಮತ್ತು ಸ್ವಾತಿ ದಂಪತಿಯ ಮಗು ಧರಣಿ ಮೃತ ಮಗು. ಬೆಳಗ್ಗೆ 10 ಗಂಟೆ ಸುಮಾರಿಗೆ ರೆಲ್ಲಿವಾಸ್ಲಾ ಬೂತ್ ನಲ್ಲಿ ಮಗುವಿಗೆ ಲಸಿಕೆ ಹಾಕಿಸಲಾಗಿದೆ. ಸ್ವಲ್ಪ ಸಮಯದ ನಂತರ ತಾಯಿ ಮಗುವಿಗೆ ಎದೆ ಹಾಲು ನೀಡಿದ್ದಾರೆ. ಒಂದು ನಿಮಿಷದ ಬಳಿಕ ಮಗು ವಾಂತಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕೂಡಲೇ ಮಗುವನ್ನು ಸ್ಥಳೀಯ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೂಡಲೇ ಪೋಷಕರು ಮಗುವನ್ನು ಬೋಗಪುರಂ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗು ಸತ್ತಿರುವ ವಿಷಯ ತಿಳಿಸಿದ್ದಾರೆ.

ಉಸಿರಾಟದ ತೊಂದರೆಯಿಂದಾಗಿ ಮಗು ಸಾವನ್ನಪ್ಪಿರಬಹುದು ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಪದ್ಮಜಾ ತಿಳಿಸಿದ್ದಾರೆ.

ಲಸಿಕೆ ಹಾಕಿಸುವ ವೇಳೆ ಮಗುವಿಗೆ ಸ್ವಲ್ಪ ಜ್ವರ ಇತ್ತು. ಹೀಗಾಗಿ ಪೋಲಿಯೋ ಲಸಿಕೆ ಹಾಕಿಸಿದ ನಂತರ ಅರ್ಧಗಂಟೆ ಮಗುವಿನ ಪರಿಸ್ಥಿತಿಯನ್ನು ಅವಲೋಕಿಸಲಾಗಿತ್ತು, ಬಳಿಕ ಮಗುವನ್ನು  ಪೋಷಕರ ಜೊತೆ ಮನೆಗೆ ಕಳುಹಿಸಲಾಗಿತ್ತು.

ಮನೆಗೆ ಬಂದ ನಂತರ ತಾಯಿ ಮಗುವಿಗೆ ಎದೆ ಹಾಲು ನೀಡಿದ್ದಾರೆ. ಒಂದು ನಿಮಿಷದ ಬಳಿಕ ಮಗು ವಾಂತಿ ಮಾಡಿಕೊಂಡಿದೆ. ಕೂಡಲೇ ಪೋಷಕರು ಪೊಲಿಯೋ ಬೂತ್ ಗೆ ಬಂದು ವಿಷಯ ತಿಳಿಸಿದ್ದಾರೆ. ಅವರ ಜೊತೆ ಸ್ಟಾಫ್ ನರ್ಸ್ ಕಳುಹಿಸಲಾಯಿತು. ಮಗುವನ್ನು ಪರೀಕ್ಷಿಸಿದ ಬಳಿಕ ಮಗುವನ್ನು ಸ್ಥಳೀಯ ಪ್ರಾಥಮಿಕ ಆಸ್ರತ್ರೆಗೆ ಕರೆದೊಯ್ಯಲಾಯಿತು.  ಅಲ್ಲಿ ಮಗುನ್ನು ಪರೀಕ್ಷೆ ಮಾಡಿದ ವೈದ್ಯರು, ಎಮರ್ಜೆನ್ಸಿ ಇಂಜೆಕ್ಷನ್ ನೀಡಿ,  ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಹರಿಣಿಯನ್ನು ಅಲ್ಲಿ ಪರೀಕ್ಷಿಸಿದ ಮಕ್ಕಳ ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ನರ್ಸ್ ಹೇಳುವ ಪ್ರಕಾರ ಮಗುವಿನ ಪೋಷಕರು ಶನಿವಾರ ರೇಷನ್ ತರಲು ಹೋಗಿ ಅಲ್ಲಿ ತುಂಬಾ ಹೊತ್ತಿನ ತನಕ ಬಿಸಿಲಿನಲ್ಲಿ ಕಾಯಿಸಿದ್ದಾರೆ, ಹೀಗಾಗಿ ಮಗುವಿಗೆ ತುಂಬಾ ಜ್ವರವಿತ್ತು. ಎಂದು ಹೇಳಿದ್ದಾರೆ.

ಲಸಿಕೆ ಹಾಕುವ ವೇಳೆ ಮಗುವಿಗೆ ಸ್ವಲ್ಪ ಪ್ರಮಾಣದ ಜ್ವರವಿತ್ತು ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಇದೇ ಬೂತ್ ನಲ್ಲಿ ಸುಮಾರು 88 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲಾಗಿದೆ. ಹರಿಣಿಗೆ ಹಾಕಿದ ಪೋಲಿಯೋ ಹನಿಯಿದ್ದ ಬಾಟಲ್ ಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT