ದೇಶ

ದೆಹಲಿಯಲ್ಲಿ ರನ್ ವೇ ಬಿಟ್ಟು ಟ್ಯಾಕ್ಸಿ ವೇಗೆ ನುಗ್ಗಿದ ಇಂಡಿಗೋ ವಿಮಾನ

Lingaraj Badiger
ನವದೆಹಲಿ: ವಿಶಾಖಪಟ್ಟಣಂ ಮೂಲದ ಇಂಡಿಗೋ ವಿಮಾನ ನಿಗದಿತ ರನ್ ವೇ ಬಿಟ್ಟು ಟ್ಯಾಕ್ಸಿ ವೇಗೆ ನುಗ್ಗಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಇಂದು ಬೆಳಗ್ಗೆ 5.40ಕ್ಕೆ ಈ ಘಟನೆ ನಡೆದಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಈ ಘಟನೆಯಿಂದಾಗಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವು ವಿಮಾನಗಳ ದಿಕ್ಕನ್ನು ಬದಲಿಸಲಾಗಿದೆ.
ಟ್ಯಾಕ್ಸಿಗೆ ಅನುಮತಿ ನೀಡಲಾಗಿದ್ದ ಸಿ ಲೇನ್ ನಲ್ಲಿ ನವದೆಹಲಿ- ವಿಶಾಖಪಟ್ಟಣಂ ಇಂಡಿಗೋ ವಿಮಾನ 6ಇ 719 ಇಳಿದಿದೆ. ಈ ವಿಮಾನ ನಿಗದಿತ ರನ್ ವೇ 28ರಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅಲ್ಲಿ ಈಗಾಗಲೇ ಜೆಟ್ ಏರ್ ವೇಯ್ಸ್ ವಿಮಾನ ನಿಲ್ಲಿಸಿದ್ದರಿಂದ ವಿಮಾನದ ಪೈಲೆಟ್ ಟ್ಯಾಕ್ಸಿ ವೇ ನಲ್ಲಿ ಇಳಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಇನ್ನು ಘಟನೆಗೆ 'ಅಸ್ಪಷ್ಟ ಗೋಚರತೆ'ಯೇ ಕಾರಣ ಎಂದು ಇಂಡಿಗೋ ತಿಳಿಸಿದೆ.
SCROLL FOR NEXT