ದೇಶ

ನವ ಭಾರತ ನಿರ್ಮಾಣಕ್ಕೆ ಬಲಿಷ್ಟ ವ್ಯವಸ್ಥೆ ನಿರ್ಮಾಣ ಮಾಡಿ: ಐಎಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಕಿವಿಮಾತು

Manjula VN
ನವದೆಹಲಿ: ಬದಲಾವಣೆಗಳನ್ನು ವಿರೋಧಿಸುವ ಮನಸ್ಸನ್ನು ನಿಯಂತ್ರಿಸಿ, ನವ ಭಾರತ ನಿರ್ಮಾಣಕ್ಕೆ ಬಲಿಷ್ಟ ವ್ಯವಸ್ಥೆ ನಿರ್ಮಾಣ ಮಾಡಿ ಎಂದು ಐಎಎಸ್ ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಕಿವಿಮಾತು ಹೇಳಿದ್ದಾರೆ. 
2015ನೇ ಬ್ಯಾಚಿನ ಸಹಾಯಕ ಕಾರ್ಯದರ್ಶಿಗಳ ಉದ್ಘಾಟನಾ ಸಮಾವೇಶದಲ್ಲಿ ಮಾತನಾಡಿರುವ ಅವರು, ಭಾರತ ಇನ್ನೂ ಅಭಿವೃದ್ಧಿಗೊಳ್ಳಬೇಕಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇತರೆ ದೇಶಗಳು ಭಾರತಕ್ಕಿಂತಲೂ ಹೆಚ್ಚು ಸಂಪನ್ಮೂಲಗಳ ನಿರ್ಬಂಧಗಳನ್ನು ಎದುರಿಸಿವೆ. ಬದಲಾವಣೆಗೆ ಧೈರ್ಯದ ಅಗತ್ಯವಿದೆ. ವ್ಯವಸ್ಥೆ ಬದಲಾಯಿಸಲು ಕ್ರಿಯಾತ್ಮಕ ಬದಲಾವಣೆಯ ಅಗತ್ಯವಿದೆ  ಎಂದು ಹೇಳಿದ್ದಾರೆ. 
ಛಿದ್ರಗೊಂಡಿರುವ ಆಡಳಿತ ವ್ಯವಸ್ಥೆ ಸಾಮೂಹಿಕ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಗರಿಷ್ಟ ಮಟ್ಟಕ್ಕೆ ತಲುಪಲು ಬಿಡುವುದಿಲ್ಲ. ಯುವ ಅಧಿಕಾರಿಗಳು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಬೇಕು. ಇದರಿಂದ ಹೊಸ ಶಕ್ತಿ ಹಾಗೂ ಹೊಸ ಕಲ್ಪನೆ, ಆಲೋಚನೆಗಳು ವ್ಯವಸ್ಥೆಗೆ ಬದಲಾವಣೆಯಾಗಲು ಸಹಕಾರಿಯಾಗಲಿದೆ. ಯುಪಿಎಸ್ ಫಲಿತಾಂಶದ ವರೆಗೂ ನೀವು ಪಟ್ಟ ಪರಿಶ್ರಮವನ್ನು ಸವಾಲುಗಳನ್ನು, ಅವಕಾಶಗಳೊಂದಿಗೆ ನೀವು ಹೇಗೆ ಬೆಳೆದು ಬಂದಿರಿ ಎಂಬುದನ್ನು ನೆನಪಿಸಿಕೊಳ್ಳಿರಿ ಎಂದು ತಿಳಿಸಿದ್ದಾರೆ. 
SCROLL FOR NEXT