ದೇಶ

ನೂತನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್ ಅಧಿಕಾರ ಸ್ವೀಕಾರ!

Srinivasamurthy VN

ನವದೆಹಲಿ: ನೂತನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದು, ಈ ಹಿಂದೆ ಅಟಾರ್ನಿ ಜನರಲ್ ಆಗಿದ್ದ ಮುಕುಲ್ ರೋಹ್ಟಗಿ ಅವರು ವೇಣುಗೋಪಾಲ್ ಅವರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದರು.

ಈ ಹಿಂದೆ ಆಟಾರ್ನಿ ಜನರಲ್ ಆಗಿದ್ದ ಮುಕುಲ್ ರೋಹ್ಟಗಿ ಅವರು ತಮ್ಮ ಅವಧಿ ಮುಂದುವರೆಸಲು ನಿರಾಕರಿಸಿದ್ದರಿಂದ ಕೇಂದ್ರ ಸರ್ಕಾರ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞರೂ ಕೂಡ ಆಗಿರುವ ಕೆಕೆ ವೇಣುಗೋಪಾಲ್  ಅವರನ್ನು ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿತ್ತು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿರುವಂತೆಯೇ ಕಾನೂನು ಸಚಿವಾಲಯದೊಂದಿಗೆ ತುರ್ತು ಸಭೆ  ನಡೆಸಿ 86 ವರ್ಷದ ಹಿರಿಯ ನ್ಯಾಯವಾದಿ ಮತ್ತು ಸಂವಿಧಾನ ತಜ್ಞ ವೇಣುಗೋಪಾಲ್ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಕ ಮಾಡಲು ನಿರ್ಧರಿಸಿತ್ತು.

1960ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ಆರಂಭಿಸಿದ ವೇಣುಗೋಪಾಲ್ 50ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. 1972ರಲ್ಲಿ ಅವರು ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು. ಚೆನ್ನೈನಲ್ಲಿ ವಾಸವಿದ್ದ  ವೇಣುಗೋಪಾಲ್ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಸಾಯಿ ಅವರ ಆಹ್ವಾನದ ಮೇರೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು.

SCROLL FOR NEXT