ದೇಶ

ದೇಶಾದ್ಯಂತ 18,760 ಡೆಂಗ್ಯೂ ಪ್ರಕರಣ ವರದಿ, ಕೇರಳದಲ್ಲಿ ಅತಿ ಹೆಚ್ಚು

Lingaraj Badiger
ನವದೆಹಲಿ: ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿದ್ದು, ಪ್ರಸಕ್ತ ವರ್ಷ ದೇಶದಲ್ಲಿ 18,760 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅಲ್ಲದೆ ಮುಂಗಾರು ಮುಂಚಿತವಾಗಿ ಪ್ರವೇಶಿಸಿದ ಕಾರಣ ಕಾಯಿಲೆ ವೇಗವಾಗಿ ಹರಡಿದ್ದು, ಪ್ರಕರಣಗಳು ಹೆಚ್ಚಾಗಿವೆ ಎಂದಿದೆ.
ಕೇರಳದಲ್ಲಿ ಅತಿ ಹೆಚ್ಚು 9,104 ಪ್ರಕರಣಗಳು ವರದಿಯಾಗಿದ್ದು,  ತಮಿಳುನಾಡಿನಲ್ಲಿ 4,174 ಹಾಗೂ ಕರ್ನಾಟಕದಲ್ಲಿ 1,945 ಪ್ರಕರಣಗಳು ಜುಲೈ 2ರ ವರೆಗೆ ವರದಿಯಾಗಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು 4,047 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ.
ಈ ಸಂಬಂಧ ಇಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಪರಿಶೀಲನಾ ಸಭೆ ನಡೆಸಿದ್ದು, ಆರೋಗ್ಯ ಕಾರ್ಯದರ್ಶಿ ಸಿ.ಕೆ. ಮಿಶ್ರಾ, ಐಸಿಎಂಆರ್‌ನ ನಿರ್ದೇಶಕರಾದ ಸೌಮ್ಯಾ ಸ್ವಾಮಿನಾಥನ್‌, ವೆಕ್ಟರ್‌ ಮೂಲಕ ಹರಡುವ ರೋಗಗಳ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮ(ಎನ್‌ವಿಬಿಡಿಸಿಪಿ) ಮತ್ತು ಇತರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜೆಪಿ ನಡ್ಡಾ ಅವರು, ಈ ಸಂಬಂಧ ಎರಡು ಪುನರ್‌ ಅವಲೋಕನ ಚರ್ಚೆಗಳನ್ನು ನಡೆಸಿದ್ದು, ದೆಹಲಿ, ಕೇಂದ್ರಾಡಳಿತ ಪ್ರದೇಶ ಮತ್ತು ಇರತ ರಾಜ್ಯಗಳ ಪೂರ್ವ ತಯಾರಿ ತೃಪ್ತಿಕರವಾಗಿದೆ. ಈಗಾಗಲೇ ಮೂರು ಬಾರಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ವಿಷಯ ಕುರಿತು 13 ಸಲಹೆಗಳನ್ನು ನೀಡಿದ್ದೇವೆ. ಆರೋಗ್ಯ ಕಾರ್ಯದರ್ಶಿಗಳು ಶೀಘ್ರದಲ್ಲಿ ಇತರ ರಾಜ್ಯಗಳ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸುವುದಾಗಿ ತಿಳಿಸಿದ್ದಾರೆ.
SCROLL FOR NEXT