ದೇಶ

500, 1000 ರೂ. ನೋಟು ಬದಲಾವಣೆಗೆ ಮತ್ತೊಂದು ಅವಕಾಶ ಏಕೆ ಕೊಡಬಾರದು?: ಕೇಂದ್ರಕ್ಕೆ ಸುಪ್ರೀಂ

Srinivas Rao BV
ನವದೆಹಲಿ: ನ.8 ರಂದು ರಾತ್ರಿ ನಿಷೇಧಗೊಂಡಿದ್ದ ಹಳೆಯ 500, 1000 ರೂ ನೋಟುಗಳ ಬದಲಾವಣೆಗೆ ಮತ್ತೊಂದು ಅವಕಾಶ ಏಕೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಕೇಳಿದೆ. 
ಪ್ರಾಮಾಣಿಕ ಪ್ರಕರಣಗಳನ್ನು ಪರಿಗಣಿಸಿ, ಹಳೆಯ ನೋಟುಗಳ ಬದಲಾವಣೆಗೆ ಮತ್ತಷ್ಟು ಸಮಯಾವಕಾಶ ಏಕೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿಗಳು ಪ್ರಶ್ನಿಸಿದ್ದು, ಹಳೆಯ ನೋಟುಗಳ ಬದಲಾವಣೆಗೆ ಅವಕಾಶ ನೀಡುವ ಬಗ್ಗೆ 2 ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಗೆ ಸೂಚನೆ ನೀಡಿದ್ದಾರೆ. 
ಕಷ್ಟಪಟ್ಟು ಸಂಪಾದನೆ ಮಾಡಿರುವುದನ್ನು ನೀವು ವ್ಯರ್ಥವಾಗುವಂತೆ ಮಾಡುವಂತಿಲ್ಲ. ನ್ಯಾಯಯುತವಾಗಿ ಸಂಪಾದಿಸಿರುವ ಹಣಕ್ಕೆ ಅನ್ಯಾಯ ಉಂಟಾಗುವುದಿಲ್ಲ ಎಂದು ಜನರಿಗೆ ಭರವಸೆ ನೀಡಿದ್ದೀರಿ, ಈಗ ನಿಮ್ಮ ಭರವಸೆಯನ್ನು ಹುಸಿಗೊಳಿಸಲು ಸಾಧ್ಯವಿಲ್ಲ. ಡಿ.31 ರ ನಂತರವೂ ಒಂದು ವೇಳೆ ನೋಟು ಬದಲಾವಣೆ ಮಾಡಲು ನಿಜವಾಗಿಯೂ ಸಾಧ್ಯವಾಗದೇ ಇದ್ದವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಕೋರ್ಟ್ ಹೇಳಿದೆ. 
SCROLL FOR NEXT