ಸಂಗ್ರಹ ಚಿತ್ರ 
ದೇಶ

ನೋಟು ನಿಷೇಧ ಬಳಿಕ ಡಿಜಿಟಲ್ ಪಾವತಿಯಲ್ಲಿ ಗಣನೀಯ ಏರಿಕೆ: ನೀತಿ ಆಯೋಗ

2016-17ನೇ ಸಾಲಿನಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.55ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್ ಹೇಳಿದ್ದಾರೆ.

ನವದೆಹಲಿ: 2016-17ನೇ ಸಾಲಿನಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.55ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್ ಹೇಳಿದ್ದಾರೆ.

ಎಫ್ಐಸಿಸಿಐ ಆಯೋಜಿಸಿದ್ದ 'ಡಿಜಿಟಲ್ ಪಾವತಿ - ಟ್ರೆಂಡ್ ಗಳು, ಸಮಸ್ಯೆಗಳು ಮತ್ತು ಸವಾಲುಗಳು' ಎಂಬ ವಿಚಾರದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ಪಿ ವಾಟಲ್  ಅವರು, "ನೋಟು ನಿಷೇಧ ಬಳಿಕ ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಾಗಿದ್ದು, ನೋಟು ನಿಷೇಧವಾದ ಒಂದೇ ವರ್ಷದಲ್ಲಿ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಶೇ.28ರಷ್ಟು ಏರಿಕೆಯಾಗಿದೆ" ಎಂದು ಹೇಳಿದರು.

ಪ್ರಮುಖವಾಗಿ ಈ ಬೆಳವಣಿಗೆಗೆ ಕೇಂದ್ರ ಸರ್ಕಾರದ ನೋಟು ನಿಷೇಧ ಜಾರಿ ಕಾರಣವಾಗಿದ್ದು, ನೋಟು ನಿಷೇಧದ ಬಳಿಕ ಡಿಜಿಟಲ್ ಪಾವತಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, 2016-17ನೇ ಸಾಲಿನಲ್ಲಿ ಈ ಪ್ರಮಾಣದಲ್ಲಿ  ಶೇ.28ರಷ್ಟು ಏರಿಕೆ ಕಂಡುಬಂದಿದೆ. ಅಂತೆಯೇ ನೋಟು ನಿಷೇಧದ ಬಳಿಕ ಬಂದ ಡಿಜಿಟಲ್ ಪಾವತಿಗಳ ಕುರಿತ ತಂತ್ರಜ್ಞಾನ ಮತ್ತು ಆ್ಯಪ್ ಗಳ ಪಾಲು ಕೂಡ ಇದರಲ್ಲಿ ಸೇರಿದೆ. ಇದೇ ಸಂದರ್ಭದಲ್ಲೇ ಜಿಎಸ್ ಟಿ ಕೂಡ  ಜಾರಿಯಾಗಿರುವುದರಿಂದ ಡಿಜಿಟಲ್ ಪಾವತಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಹುಟ್ಟಿಸಿದೆ ಎಂದು ರತನ್ ಅವರು ಅಭಿಪ್ರಾಯಪಟ್ಟರು.

ನೀತಿ ಆಯೋಗದ ವಿಶ್ಲೇಷಣೆಯ ದತ್ತಾಂಶಗಳ ಪ್ರಕಾರ ಡಿಜಿಟಲ್ ಪಾವತಿಯಲ್ಲಿ ಶೇ.24ರಷ್ಟು ಅಭಿವೃದ್ಧಿ ಕಂಡುಬರುತ್ತಿದ್ದು, ನಿಜಕ್ಕೂ ಇದು ಆಶಾದಾಯಕ ಬೆಳವಣಿಗೆಯಾಗಿದೆ. ಭಾರತದಲ್ಲಿ ನಿಜಕ್ಕೂ ಡಿಜಿಟಲ್ ಪಾವತಿಯ  ಕ್ರಾಂತಿಯಾಗುತ್ತಿದೆ. ಆಧುನಿಕ ತಂತ್ರಜ್ಞಾನ ಹಾಗೂ ಗ್ರಾಹಕ ಸ್ನೇಹಿ ಆ್ಯಪ್ ಸೇವೆಗಳು, ಡಿಜಿಟಲ್ ಪಾವತಿ ಕುರಿತಂತೆ ಜನರಲ್ಲಿ ನಂಬಿಕ ಭಾವನೆ ಮೂಡಿಸುತ್ತಿದೆ. ಇದೇ ಸಕಾರಾತ್ಮಕ ಬೆಳವಣಿಗೆ ಮುಂದುವರೆದರೆ ಖಂಡಿತಾ  ಡಿಜಿಟಲ್ ಪಾವತಿ ಕುರಿತಂತೆ ನಾವು ನಮ್ಮ ಗುರಿಯನ್ನು ತಲುಪಬಹುದು ಎಂದು ರತನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT