ನರೇಂದ್ರ ಮೋದಿ 
ದೇಶ

ಯುವಕರಿಗಾಗಿ ಪುಸ್ತಕ ಬರೆಯಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ದೇಶದ ಯುವ ಜನತೆಗಾಗಿ ಪುಸ್ತಕವೊಂದನ್ನು ಬರೆಯಲಿದ್ದಾರೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾಪೂರ್ವ ಒತ್ತಡ ನಿವಾರಣೆ ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಯುವ ಜನತೆಗಾಗಿ ಪುಸ್ತಕವೊಂದನ್ನು ಬರೆಯಲಿದ್ದಾರೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾಪೂರ್ವ ಒತ್ತಡ ನಿವಾರಣೆ ಮತ್ತು ಪರೀಕ್ಷೆ ಬರೆದ ನಂತರ ಮುಂದೇನು ಎಂಬ  ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುಸ್ತಕ ಬರೆಯಲಿದ್ದಾರೆ.
ಈ ಪುಸ್ತಕ ಬಹುಭಾಷೆಗಳಲ್ಲಿ  ವರ್ಷಾಂತ್ಯದ  ವೇಳೆಗೆ  ಪ್ರಕಟಗೊಳ್ಳಲಿದೆ ಎಂದು ಪೆಂಗ್ವಿನ್‌ ರಾಂಡಮ್‌ ಹೌಸ್‌ ಪ್ರಕಾಶನ ಸಂಸ್ಥೆ ತಿಳಿಸಿವೆ. ಪ್ರಮುಖವಾಗಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳನ್ನು ಪುಸ್ತಕ ಒಳಗೊಳ್ಳಲಿದೆ.
ವಿದ್ಯಾರ್ಥಿಗಳ ಪಾಲಿಗೆ ಈ ಪುಸ್ತಕ ಗೆಳೆಯನಂತಿರುತ್ತದೆ ಮತ್ತು ಪರೀಕ್ಷಾ ತಯಾರಿಗೆ ನೆರವಾಗುತ್ತದೆ ಎಂದು ಪ್ರಧಾನಿಯವರು ನಂಬಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ. ಪುಸ್ತಕವು ಅನೌಪಚಾರಿಕ ಸ್ವರೂಪದಲ್ಲಿರುತ್ತದೆ ಮತ್ತು ಸಂವಾದಾತ್ಮಕ ವಾಗಿರುತ್ತದೆ. ಅಂಕಗಳಿಗಿಂತ ಜ್ಞಾನ ಮೇಲು ಎಂಬ ದಾಟಿಯಲ್ಲಿ ಇರುತ್ತದೆ. ಭವಿಷ್ಯದಲ್ಲಿ ಹೇಗೆ ಜವಾಬ್ದಾರಿಯಿಂದ ಇರಬೇಕು ಎಂಬುದನ್ನು ತಿಳಿಸಲಿದೆ.
ಪುಸ್ತಕ ಬರೆಯುವ ಯೋಚನೆ ಸ್ವತಃ ಮೋದಿಯವರದು.‘ಮನ್‌ ಕಿ ಬಾತ್‌’ ರೇಡಿಯೋ ಭಾಷಣಕ್ಕೆ ಬಂದ ಅತ್ಯುತ್ತಮ ಪ್ರತಿಕ್ರಿಯೆಯಿಂದಾಗಿ  ತಮ್ಮ ಯೋಚನೆಗಳನ್ನು ಪುಸ್ತಕದಲ್ಲಿ ದಾಖಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೊಸ ಒಳನೋಟಗಳು ಮತ್ತು ಉಪ ವ್ಯಾಖ್ಯಾನಗಳೊಂದಿಗೆ ಪುಸ್ತಕ ಬರೆಯಲಿದ್ದಾರೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಯುವ ನಾಯಕತ್ವದ ನಾಳೆಗಳ ಬಗ್ಗೆ  ನನ್ನ ಪರಿಕಲ್ಪನೆ ಮತ್ತು ನನ್ನ ಹೃದಯಕ್ಕೆ ಹತ್ತಿರವಿರುವ ವಿಷಯದ ಬಗ್ಗೆ ಬರೆಯಲಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ