ಸುಪ್ರೀಂಕೋರ್ಟ್ 
ದೇಶ

ನಗರ ವ್ಯಾಪ್ತಿಯ ಬಾರ್ ಗಳಿಗೆ ಹೆದ್ದಾರಿ ಮದ್ಯ ನಿಷೇಧದಿಂದ ವಿನಾಯ್ತಿ: ಸುಪ್ರೀಂ ಕೋರ್ಟ್

ಗರ ವ್ಯಾಪ್ತಿಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ತಿಳಿಸಿದೆ. ಇದರಿಂದಾಗಿ ...

ನವದೆಹಲಿ: ನಗರ  ವ್ಯಾಪ್ತಿಯ  ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ತಿಳಿಸಿದೆ. ಇದರಿಂದಾಗಿ ಬೆಂಗಳೂರು ಮತ್ತು ಚಂಡಿಘಡ ನಗರಗಳಲ್ಲಿರುವ  ಬಾರ್  ಮತ್ತು ಪಬ್ ಗಳಿಗೆ ರಿಲೀಫ್ ಸಿಕ್ಕಂತಾಗಿದೆ. 
ಮಧ್ಯ ನಿಷೇಧ ಮಾಡಿದ್ದು ರಾಷ್ಟ್ರೀಯ ಹೆದ್ದಾರಿಗಳಿಗೆ ಮಾತ್ರ,  ಮಧ್ಯಸೇವಿಸಿ ಚಾಲಕರು ಹೆದ್ದಾರಿಗಳಲ್ಲಿ ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದರು, ಹೀಗಾಗಿ ಹೆದ್ದಾರಿಗಳಲ್ಲಿ ಮಧ್ಯ ಮಾರಾಟ ನಿಷೇಧಕ್ಕೆ ಆದೇಶಿಸಲಾಗಿತ್ತು,  ಆದರೆ ಇದನ್ನ ನಗರದೊಳಗಿರುವ ಬಾರ್ ಗಳಿಗೆ ಅನ್ವಯಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ತಿಳಿಸಿದೆ. 
ನಗರ ವ್ಯಾಪ್ತಿಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಬಹುದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವ ಸುಪ್ರೀಂ ಡಿನೋಟಿಫೈ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಎಂದು ಹೇಳಿದೆ. 
ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಗಳನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಚಂಡಿಘಡ ಆಡಳಿತ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ನಗರ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವುದು ತಪ್ಪಿಲ್ಲ ಎಂದು ಹೇಳಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಟಿ20 ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 101 ರನ್‌ಗಳ ದಾಖಲೆಯ ಜಯ; ಕಟಕ್‌ನಲ್ಲಿ ಹರಿಣರಿಗೆ ಮೊದಲ ಸೋಲು!

Indigo ವಿರುದ್ಧ ದಿಟ್ಟ ಕ್ರಮ: ವಿಮಾನ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!

Microsoft ಮೆಗಾ ಹೂಡಿಕೆ: 'AI 1st ಫ್ಯೂಚರ್'ಗಾಗಿ 1.5 ಲಕ್ಷ ಕೋಟಿ ರೂ ಬಂಡವಾಳ; ಬೆಂಗಳೂರಿನಲ್ಲಿ AI ಘಟಕ!

1st T20I: ಹಾರ್ದಿಕ್ ಪಾಂಡ್ಯಾ ಏಕಾಂಗಿ ಹೋರಾಟ; ದಕ್ಷಿಣ ಆಫ್ರಿಕಾ ಗೆ 176 ರನ್ ಗುರಿ!

SCROLL FOR NEXT