ರಾಮೇಶ್ವರಂ: ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಾದೇಶಿಕ ಜಲದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ 8 ಮಂದಿ ಮೀನುಗಾರರನ್ನು ಬಂಧಿಸಿದೆ.
ಕಳೆದ ರಾತ್ರಿ ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಿನಂನಲ್ಲಿ ಮೀನುಗಾರರಿಗೆ ಸೇರಿದ ಎರಡು ದೋಣಿಗಳನ್ನು ನೌಕಾಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ಬಂಧಿತ ಮೀನುಗಾರರನ್ನು ಕಾಗೆಸಂತುರೈಗೆ ಕರೆದೊಯ್ಯಲಾಗಿದೆ. ಮತ್ತೊಂದು ಘಟನೆಯಲ್ಲಿ, ನೆಡುಂಥೆವು ಕರಾವಳಿ ಪ್ರದೇಶದಲ್ಲಿ ದೋಣಿಯೊಂದು ಮುಳುಗಿ ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿ ತೀರಕ್ಕೆ ಕರೆ ತಂದರು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.