ಭೋಪಾಲ್: ಮಧ್ಯಪ್ರದೇಶದ ಮಂಡಸೌರ್ ನಲ್ಲಿ ರೈತರ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್, ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಪರಸ್ ಸಕ್ಲೇಚ್ ಅವರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಜೂನ್ 6ರಂದು ರೈತರ ಮೇಲೆ ನಡೆದ ಗೊಲಿಬಾರ್ ಖಂಡಿಸಿ ಕಿಸನ್ ಮುಕ್ತಿ ಯಾತ್ರೆ ಅಖಿಲ ಭಾರತ ಕಿಸನ್ ಸಂಘರ್ಷ ಸಹಕಾರ ಸಮಿತಿಯ ಸಹಯೋಗದಲ್ಲಿ ಪ್ರತಿಭಟನಾ ರ್ಯಾಲಿಗೆ ಕರೆ ನೀಡಿದೆ.
ಮಂಡಸೌರ್ ನಲ್ಲಿ ಇಂದಿನಿಂದ ಆರಂಭವಾಗಿರುವ ರೈತರ ಪ್ರತಿಭಟನಾ ರ್ಯಾಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಮೂಲಕ ಜುಲೈ 18ರಂದು ರಾಷ್ಟ್ರ ರಾಜಧಾನಿ ದೆಹಲಿ ತಲುಪಲಿದೆ.