ನವದೆಹಲಿ: ಬುರ್ಹಾನ್ ವನಿಯನ್ನು ಭಾರತೀಯ ಸೇನಾ ಪಡೆ ಸಿಬ್ಬಂದಿಗಳು ಹೊಡೆದುರುಳಿಸಿ ಒಂದು ವರ್ಷ ಕಳೆದಿದ್ದರೂ ಆತನ ವಿಷಯವಾಗಿ ವಿವಾದಗಳು ಮುಂದುವರೆದಿದ್ದು, ಕಾಂಗ್ರೆಸ್ ನಾಯಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಬಿರ್ಹಾನ್ ವನಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್, ಬುರ್ಹನ್ ವನಿ ಪ್ರಕರಣದಲ್ಲಿ ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದಿದ್ದರೆ, ಆತನನ್ನು ಹತ್ಯೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಮಾತುಕತೆ ನಡೆಸಿ, ಆತನನ್ನು ಉಳಿಸುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದನಾಗಿರುವ ಸೈಫುದ್ದೀನ್ ಸೋಜ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವನಿಯನ್ನು 2016 ರ ಜುಲೈ 8 ರಂದು ಭದ್ರತಾ ಪಡೆ ಸಿಬ್ಬಂದಿಗಳು ಹೊಡೆದುರುಳಿಸಿದ್ದರು.