ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯಾಗಿ ಒಂದು ವರ್ಷ ಕಳೆದಿದ್ದು, ಹತ್ಯೆಯ ವಾರ್ಷಿಕೋತ್ಸವದ ವೇಳೆ ಯಾವುದೇ ರೀತಿಯ ರಕ್ತಪಾತ ಆಗುವುದು ಬೇಡ ಶಾಂತಿ ಕಾಪಾಡಿ ಎಂದು ಆತನ ತಂದೆ ಮನವಿ ಮಾಡಿದ್ದಾರೆ.
ಯಾವುದೇ ರೀತಿಯ ಕೊಲೆ ಅಥವಾ ರಕ್ತಪಾತವನ್ನು ನಾನು ಬಯಸುವುದಿಲ್ಲ, ಶಾಂತಿ ಮತ್ತು ಸಾಮರಸ್ಯವನ್ನು ನಾನು ಬಯಸುತ್ತೇನೆ ಎಂದು ಮುಜಾಫರ್ ಅಹ್ಮದ್ ವನಿ ವಿಡಿಯೋ ಮಸೇಜ್ ಕಳುಹಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ಗೀನ್ ಕಮಾಂಡರ್ ಬುರ್ಹಾನ್ ವನಿ ಸಾವಿನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ.ಬುರ್ಹಾನ್ ವನಿಯ ಮೂಲಕ ಸ್ಥಳ, ಪುಲ್ವಾಮ ಜಿಲ್ಲೆ, ಅನಂತನಾಗ್, ಸೋನಿಪತ್, ಕುಲ್ಗಮ್, ಬಾರಾಮುಲ್ಲಾ, ಸೋಪೋರ್, ಮತ್ತು ಇತರೆ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಮೇಲೆ ನಿಗಾ ವಹಿಸಿದ್ದು ಭದ್ರತೆ ಹೆಚ್ಚಿಸಲಾಗಿದೆ.