ನವದೆಹಲಿ: ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡಿರುವುದರ ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಪಾಕಿಸ್ತಾನದೊಂದಿಗೆ ಭಾರತ ರಾಜತಾಂತ್ರಿಕ ಪ್ರತಿಭಟನೆಯೊಡ್ಡಿದೆ.
ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಪೂಂಚ್ ಹಾಗೂ ಕೃಷ್ಣ ಘಾಟಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಈ ವೇಳೆ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಭಾರತ ರಾಜತಾಂತ್ರಿಕ ಪ್ರತಿಭಟನೆಯೊಡ್ಡಿದ್ದು, ಭಯೋತ್ಪಾದಕ ಚಟುವಟಿಕೆಗಳ ಬಗ್ಗೆಯೂ ಭಾರತ ಆತಂಕ ವ್ಯಕ್ತಪಡಿಸಿದೆ ಎಂದು ಭಾರತೀಯ ಹೈ ಕಮಿಷನ್ ಹೇಳಿದೆ.
ಸೇನಾ ಯೋಧ ಹಾಗೂ ಆತನ ಪತ್ನಿ ಸಾವನ್ನಪ್ಪಿದ್ದರೆ, ಅವರ ಮೂವರು ಪುತ್ರಿಯರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.