ಶ್ರೀನಗರ: ಕಾಶ್ಮೀರದ ಡಿಎಸ್ ಪಿ ಅಯೂಬ್ ಪಂಡಿತ್ ರನ್ನು ಕೊಲೆ ಮಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸೇನಾ ಪಡೆಗಳು ಹತ್ಯೆ ಮಾಡಿದ್ದು, ಈ ಪೈಕಿ ಕಾಶ್ಮೀರದ ಡಿಎಸ್ ಪಿ ಅಯೂಬ್ ಪಂಡಿತ್ ಅವರನ್ನು ಹತ್ಯೆ ಮಾಡಿದ ಉಗ್ರರೂ ಇದ್ದಾರೆ ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರು ಅಯೂಬ್ ಪಂಡಿತ್ ಅವರನ್ನು ಕಲ್ಲಿನಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿದ್ದರು. ಎನ್ ಕೌಂಟರ್ ಗೆ ಬಲಿಯಾಗಿರುವ ಉಗ್ರರ ಪೈಕಿ ಸಜ್ಜದ್ ಅಹ್ಮದ್ ಗಿಲ್ಕರ್ ಎಂಬ ಉಗ್ರ ಏಪ್ರಿಲ್ ತಿಂಗಳಿನಲ್ಲಿ ಸಿಆರ್ ಪಿಎಫ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಎಂದು ತಿಳಿದುಬಂದಿದೆ.