ಮಾಲ್ ನಲ್ಲಿ ಪ್ರವೇಶದ ದೃಶ್ಯ(ನಟಿ ದೆಬ್ಲೀನಾ ಸೇನ್ ಖಾತೆಯ ಫೋಟೋ) 
ದೇಶ

ಪಂಚೆ ಧರಿಸಿ ಹೋದ ಚಿತ್ರ ನಿರ್ದೇಶಕನಿಗೆ ಮಾಲ್ ಒಳಗೆ ಪ್ರವೇಶ ನಿರಾಕರಣೆ

ಪಂಚೆ ಧರಿಸಿದ್ದ ಕಾರಣಕ್ಕೆ ಕೋಲ್ಕತ್ತಾ ನಗರದ ಮಾಲ್ ವೊಂದಕ್ಕೆ ಚಿತ್ರ ನಿರ್ದೇಶಕ ಆಶಿಶ್ ಅವಿಕುಂತಕ್...

ಕೋಲ್ಕತ್ತಾ: ಪಂಚೆ ಧರಿಸಿದ್ದ ಕಾರಣಕ್ಕೆ ಕೋಲ್ಕತ್ತಾ ನಗರದ ಮಾಲ್ ವೊಂದಕ್ಕೆ ಚಿತ್ರ ನಿರ್ದೇಶಕ ಆಶಿಶ್ ಅವಿಕುಂತಕ್ ಅವರಿಗೆ ಪ್ರವೇಶಿಸಲು ಬಿಡಲಿಲ್ಲ ಎಂದು ಫೇಸ್ ಬುಕ್ ಪುಟದಲ್ಲಿ ಆರೋಪಿಸಿದ್ದಾರೆ. ಆದರೆ ಮಾಲ್ ನ ಅಧಿಕಾರಿಗಳು ನಿರ್ದೇಶಕರ ಈ ಆರೋಪವನ್ನು ನಿರಾಕರಿಸಿದ್ದಾರೆ.
ಆಶಿಶ್ ಅವಿಕುಂತಕ್ ಎಂಬ ಕೋಲ್ಕತ್ತಾ ಮೂಲದ ನಿರ್ದೇಶಕರು ತಮ್ಮ ಫೇಸ್ ಬುಕ್  ಪುಟದಲ್ಲಿ ಆಕ್ರೋಶ ವ್ಯಕ್ತಪಡಿಸಿ ಬರೆದಿದ್ದಾರೆ. ಕೋಲ್ಕತ್ತಾದ ಕ್ಲಬ್ ಗಳಿಗೆ ಪ್ರವೇಶ ನಿರಾಕರಿಸುವುದು ಹೊಸದೇನಲ್ಲಿ. ಆದರೆ ಈ ಬಾರಿ ನನ್ನನ್ನು ಮಾಲ್ ವೊಳಗೆ ಹೋಗಲು ಅಲ್ಲಿನ ಸಿಬ್ಬಂದಿ ಬಿಡಲಿಲ್ಲ. ಕಾರಣ ನಾನು ಪಂಚೆ ಧರಿಸಿದ್ದೆನು. ಅದನ್ನು ವಿರೋಧಿಸಿ ಕೇಳಿದ್ದಕ್ಕೆ ಲುಂಗಿ ಮತ್ತು ಧೋತಿ ಧರಿಸಿದವರನ್ನು ಭದ್ರತಾ ಕಾರಣಗಳಿಗಾಗಿ ಮಾಲ್ ಒಳಗೆ ಹೋಗಲು ಬಿಡಬಾರದು ಎಂಬ ಆದೇಶವಿದೆ ಎಂದು ಹೇಳಿದರು. ಆದರೆ ನನಗೆ ಇಂಗ್ಲೀಷ್ ಮಾತನಾಡಲು ಬರುವುದರಿಂದ ಮತ್ತು ನನ್ನ ನಿಲುವನ್ನು ಪ್ರತಿಪಾದಿಸಲು ಸಾಮರ್ಥ್ಯವಿರುವುದರಿಂದ ನನಗೆ ಕೊನೆಗೆ ಒಳ ಹೋಗಲು ಬಿಟ್ಟರು. ನಾನು ಕಳೆದ 26 ವರ್ಷಗಳಿಂದ ಲುಂಗಿ, ಪಂಚೆ ಧರಿಸುತ್ತಿದ್ದೇನೆ ಎಂದು ಹೇಳಿದರು ಎಂದರು.
ಕೋಲ್ಕತ್ತಾ ನಗರದ ಶೋಭೆಗೆ ಖಂಡಿತಾ ಇದು ಒಳ್ಳೆಯದಲ್ಲ. ಬಟ್ಟೆ ಧರಿಸುವ ವಿಚಾರದಲ್ಲಿ ಖಾಸಗಿ ಕ್ಲಬ್ ಗಳು ತಾರತಮ್ಯವನ್ನು ಮಾಡುತ್ತವೆ. ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಹೀಗೆ ಬೆದರಿಕೆಯೊಡ್ಡಲಾಗುತ್ತಿದೆ. ವರ್ಗದ ಆಧಾರದ ಮೇಲೆ ಸಂಸ್ಕೃತಿಗೆ ಅಡ್ಡಿಪಡಿಸಲಾಗುತ್ತಿದೆ. ನಾನು ಈ ವಿಷಯವನ್ನು ತುಂಬಾ ಅಸಹ್ಯದಿಂದ ಬರೆಯುತ್ತಿದ್ದೇನೆ ಎಂದು ನಿರ್ದೇಶಕ ಆಶಿಶ್ ಬರೆದುಕೊಂಡಿದ್ದಾರೆ.
ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ಆಶಿಶ್ ಅವಿಕುಂತಕ್ ಅವರನ್ನು ಸಂಪರ್ಕಿಸಿದಾಗ ನನ್ನ ಫೇಸ್ ಬುಕ್ ಪುಟದಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿದ್ದೇನೆ ಎಂದು ಹೇಳಿದರು.
ಆಶಿಶ್ ಅವರ ಗೆಳತಿ ದೆಬಲೀನಾ ಸೇನ್ ಪ್ರತಿಕ್ರಿಯೆ ನೀಡಿ, ನಾವು ಮಾಲ್ ಗೆ ಪ್ರವೇಶಿಸುವ ಹೊತ್ತಿಗೆ ಭದ್ರತಾ ಸಿಬ್ಬಂದಿ ಆಶಿಶ್ ಅವರನ್ನು ತಡೆದರು. ಪಂಚೆ ಧರಿಸಿದ ಕಾರಣ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು. ಅದಕ್ಕೆ ನಾವು ವಾಗ್ವಾದ ಮಾಡಿದಾಗ, ಆಶಿಶ್ ಇಂಗ್ಲೀಷ್ ನಲ್ಲಿ ಮಾತನಾಡಿದಾಗ ಮಾಲ್ ನ ಅಧಿಕಾರಿಗಳು ಬಂದು ಒಳಗೆ ಬಿಟ್ಟರು ಎಂದು ಹೇಳಿದರು.
ಆಶಿಶ್ ಅವರು ಇಂಗ್ಲೀಷ್ ನಲ್ಲಿ ಮಾತನಾಡಿದ ಕಾರಣ ಅವರು ಸಮಾಜದಲ್ಲಿ ಉನ್ನತ ವರ್ಗಕ್ಕೆ ಸೇರಿದವರೆಂದು ಭಾವಿಸಿ ಒಳಗೆ ಬಿಟ್ಟಿರಬೇಕು. ಆದರೆ ನಾವು ಈ ಮನೋಧರ್ಮವನ್ನು ಖಂಡಿಸುತ್ತೇವೆ ಎಂದರು.
ತಾವು ಇಡೀ ಘಟನೆಯನ್ನು ಮೊಬೈಲ್ ನಲ್ಲಿ ದಾಖಲಿಸಿಕೊಂಡಿದ್ದೇನೆ. ಮಾಲ್ ನ ಅಧಿಕಾರಿಗಳು ಜನಾಂಗೀಯ ಧೋರಣೆಯನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಲ್ ನ ಅಧಿಕಾರಿಗಳನ್ನು ಈ ಬಗ್ಗೆ ಸಂಪರ್ಕಿಸಿದಾಗ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಗೇಟಿನಲ್ಲಿರುವ ಭದ್ರತಾ ಸಿಬ್ಬಂದಿ ಮೊದಲಿಗೆ ತಡೆದು ನಿಲ್ಲಿಸಿ ಮಾಲ್ ನ ಸೂಪರ್ ವೈಸರ್ ಗೆ ತಿಳಿಸಿದರು. ಸೂಪರ್ ವೈಸರ್ ಬಂದು ನೋಡಿ ಒಳಗೆ ಹೋಗಲು ಬಿಟ್ಟರು. ಇಡೀ ಘಟನೆ ಕೆಲವು ಸೆಕೆಂಡ್ ಗಳಲ್ಲಿ ಮುಗಿದುಹೋಗಿದೆ. ಅವರು ಮಾಲ್ ಗೆ ಬರುತ್ತಿರುವುದು, ಒಳಗೆ ಹೋಗುವ ದೃಶ್ಯ ನಮ್ಮ ಬಳಿ ಇದೆ ಎನ್ನುತ್ತಾರೆ ಮಾಲ್ ನ ಅಧಿಕಾರಿಗಳು. 
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮದಲ್ಲಿ ಜನರು ಮಾಲ್ ನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT