ಸುಭಾಷ್ ಚಂದ್ರ ಬೋಸ್ 
ದೇಶ

ನೇತಾಜಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಲಿಲ್ಲ: ಫ್ರೆಂಚ್ ರಹಸ್ಯ ವರದಿ

ಫ್ರೆಂಚ್ ರಹಸ್ಯ ವರದಿಯೊಂದು ಬಹಿರಂಗಗೊಂಡಿದ್ದು, ನೇತಾಜಿ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಲಿಲ್ಲ ಎಂದು ಹೇಳಿದೆ.

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯವನ್ನು ತಿಳಿಯಲು ಭಾರತ ಸರ್ಕಾರ ಮೂರು ಆಯೋಗಗಳನ್ನು ರಚಿಸಿತ್ತು, ಈ ಪೈಕಿ 1956 ರ ಷಾ ನವಾಜ್ ಸಮಿತಿ ಹಾಗೂ 1970 ರ ಖೋಸ್ಲಾ ಸಮಿತಿ ನೇತಾಜಿ 1945 ರ ಆಗಸ್ಟ್ 18 ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ 1999 ರ ಮುಖರ್ಜಿ ಆಯೋಗ ಮಾತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾಗಲಿಲ್ಲ ಎಂದು ಹೇಳಿತ್ತು. ಈ ವರದಿಯನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಫ್ರೆಂಚ್ ರಹಸ್ಯ ವರದಿಯೊಂದು ಬಹಿರಂಗಗೊಂಡಿದ್ದು, ನೇತಾಜಿ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಲಿಲ್ಲ ಎಂದು ಹೇಳಿದೆ. 
1947 ರ ಡಿಸೆಂಬರ್ 11 ರ ಫ್ರೆಂಚ್ ರಾಷ್ಟ್ರೀಯ ಆರ್ಕೈವ್ಸ್ ನ ಆಧಾರದಗಳನ್ನು ಮುಂದಿಟ್ಟು, ನೇತಾಜಿ ಸುಭಾಷ್ ಚಂದ್ರ ಬೋಸರು ವಿಮಾನ ಅಪಘಾತದಲ್ಲಿ ಮಡಿದಿಲ್ಲ ಎಂದು ಪ್ಯಾರಿಸ್ ಮೂಲದ ಇತಿಹಾಸಕಾರ ಜೆಬಿಪಿ ಮೋರ್ ಹೇಳಿದ್ದಾರೆ. ಫ್ರೆಂಚ್ ರಾಷ್ಟ್ರೀಯ ಆರ್ಕೈವ್ಸ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೊಸರು ವಿಮಾನ ಅಪಘಾತದಲ್ಲಿ ಮೃತರಾಗಲಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ 1947 ರ ಡಿಸೆಂಬರ್ ವರೆಗೂ ನೇತಾಜಿ ಅವರ ಸುಳಿವು ದೊರೆತಿರಲಿಲ್ಲ. 1947 ರಲ್ಲೂ ನೇತಾಜಿ ಸಾವನ್ನಪ್ಪಿರಲಿಲ್ಲ ಎಂದು ಫ್ರೆಂಚ್ ರಾಷ್ಟ್ರೀಯ ಆರ್ಕೈವ್ಸ್ ನ ಆಧಾರದಗಳು ಹೇಳುತ್ತವೆ ಎಂದು ಜೆಬಿಪಿ ಮೋರ್ ಹೇಳಿದ್ದಾರೆ. 
ಫ್ರಂಚ್ ನ ರಹಸ್ಯ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನೇತಾಜಿ: ಲಿವಿಂಗ್ ಡೇಂಜರಸ್ಲಿ ಎಂಬ ಪುಸ್ತಕ ಬರೆದಿರುವ ಕಿಂಗ್ ಶುಕ್ ನಾಗ್ ಎಂಬ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!