ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೀರಾ ಪರ ಅಖಿಲೇಶ್, ಕೋವಿಂದ್ ಪರ ಮುಲಾಯಂ: ರಾಷ್ಟ್ರಪತಿ ಚುನಾವಣೆ ಸಂಬಂಧ ಸಮಾಜವಾದಿ ಪಕ್ಷದಲ್ಲಿ ಒಡಕು!

ರಾಷ್ಟ್ರಪತಿ ಚುನಾವಣೆ ಸಂಬಂಧ ಸಮಾಜವಾದಿ ಪಕ್ಷದಲ್ಲಿ ಒಡಕು ಮೂಡಿದ್ದು, ಅಖಿಲೇಶ್ ಯಾದವ್ ಬಣ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಗೆ ಬೆಂಬಲ ಸೂಚಿಸಲು ಚಿಂತನೆ ನಡೆಸಿದ್ದರೆ, ಮುಲಾಯಂ ಸಿಂಗ್...

ಅಖಿಲೇಶ್ ಯಾದವ್-ಮುಲಾಯಂ ಸಿಂಗ್ ಯಾದವ್
Srinivas Rao BV
Updated On : 16 Jul 2017, 2:11 am
ಲಖನೌ: ರಾಷ್ಟ್ರಪತಿ ಚುನಾವಣೆ ಸಂಬಂಧ ಸಮಾಜವಾದಿ ಪಕ್ಷದಲ್ಲಿ ಒಡಕು ಮೂಡಿದ್ದು, ಅಖಿಲೇಶ್ ಯಾದವ್ ಬಣ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಗೆ ಬೆಂಬಲ ಸೂಚಿಸಲು ಚಿಂತನೆ ನಡೆಸಿದ್ದರೆ, ಮುಲಾಯಂ ಸಿಂಗ್ ಯಾದವ್ ಎನ್ ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. 
ಸಮಾಜವಾದಿ ಪಕ್ಷದಲ್ಲಿ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಒಡಕು ಮೂಡಿರುವುದರಿಂದ ಅಡ್ದ ಮತದಾನ ನಡೆಯುವ ಸಾಧ್ಯತೆಗಳಿದ್ದು, ರಾಷ್ಟ್ರಪತಿ ಚುನಾವಣೆಯ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರದೇ ಇದ್ದರೂ ಸಮಾಜವಾದಿ ಪಕ್ಷದ ಆಂತರಿಕ ಕಲಹವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಎನ್ ಡಿಎ ರಾಷ್ಟ್ರಪತಿ ಘೋಷಣೆಯಾಗುತ್ತಿದ್ದಂತೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸುವ ಮೂಲಕ ಮುಲಾಯಂ ಸಿಂಗ್ ಯಾದವ್ ರಾಮನಾಥ್ ಕೋವಿಂದ್ ಗೆ ಬೆಂಬಲ ನೀಡುವ ಬಗ್ಗೆ ಸುಳಿವು ನೀಡಿದ್ದರು. 

Advertisement

Advertisement

ಇತ್ತ ಅಖಿಲೇಶ್ ಯಾದವ್ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದ್ದು, ಸಮಾಜವಾದಿ ಪಕ್ಷದಲ್ಲಿ ಒಡಕು ಮೂಡಿರುವುದು ಸ್ಪಷ್ಟವಾದಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement