ದೇಶ

ನಮ್ಮ ಬೆಂಬಲ ಕೋವಿಂದ್'ಗಲ್ಲ, ಮೀರಾ ಕುಮಾರ್'ಗೆ: ಎನ್'ಸಿಪಿ ಸ್ಪಷ್ಟನೆ

Manjula VN
ನವದೆಹಲಿ: ಆಡಳಿತಾರೂಢ ಕೇಂದ್ರದ ಎನ್ ಡಿಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್ ಅವರಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ ಎಂಬ ವರದಿಗಳನ್ನು ಎನ್'ಸಿಪಿ ಸೋಮವಾರ ತಳ್ಳಿಹಾಕಿದೆ. 
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು, ನಮ್ಮ ಪಕ್ಷ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿರುವ ಮೀರಾ ಕುಮಾರ್ ಅವರಿಗೆ ಬೆಂಬಲ ನೀಡಿದೆ. ಕೋವಿಂದ್ ಅವರಿಗೆ ಯಾವುದೇ ಸಂಸದರಾಗಲೀ, ಶಾಸಕರಾಗಲೀ ಮತ ಹಾಕಿಲ್ಲ. ಮೀರಾ ಕುಮಾರ್ ಅವರಿಗೆ ಪಕ್ಷ ಬೆಂಬಲ ನೀಡುತ್ತಿದೆ ಎಂದು ಈ ಹಿಂದೆಯೇ ಎನ್ ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಘೋಷಣೆ ಮಾಡಿದ್ದರು ಎಂದು ಹೇಳಿದ್ದಾರೆ. 
ಎನ್ ಸಿಪಿ ಕೋವಿಂದ್ ಅವರಿಗೆ ಬೆಂಬಲ ನೀಡುತ್ತಿದೆ ಎಂಬ ವರದಿಗಳು ಆಧಾರರಹಿತವಾದದ್ದು. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೇ ಈ ಹಿಂದೆಯೇ ನಮ್ಮ ಬೆಂಬಲ ಮೀರಾ ಕುಮಾರ್ ಅವರಿಗೆ ಎಂದು ಘೋಷಿಸಿದ್ದರು. ಇದೀಗ ಎಲ್ಲಾ ಸಂಸದರು ಹಾಗೂ ಶಾಸಕರು ಮೀರಾ ಅವರಿಗೆ ಮತ ಹಾಕುತ್ತಿದ್ದಾರೆಂದು ತಿಳಿಸಿದ್ದಾರೆ. 
ದೇಶದ ಅತ್ಯುನ್ನತ ಸ್ಥಾನ ಇದಾಗಿದ್ದು, ಸಂವಿಧಾನವನ್ನು ರಕ್ಷಣೆ ಮಾಡುವುದು ರಾಷ್ಟ್ರಪತಿಗಳ ಜವಾಬ್ದಾರಿಯಾಗಿರುತ್ತದೆ. ಆ ಸ್ಥಾನ ಘನತೆಯನ್ನು ಕಾಪಾಡುವವರು ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುವವರು ಗೆಲವು ಸಾಧಿಸುತ್ತಾರೆಂದಿದ್ದಾರೆ. 
SCROLL FOR NEXT