ಚೆನ್ನೈ: ನಟ ಕಮಲ್ ಹಾಸನ್ ಗೆ ತಾಕತ್ತಿದ್ದರೇ ರಾಜಕೀಯಕ್ಕೆ ಬರಲಿ ಎಂದು ತಮಿಳುನಾಡು ಹಣಕಾಸು ಸಚಿವ ಡಿ. ಜಯಕುಮಾರ್ ಸವಾಲು ಹಾಕಿದ್ದಾರೆ.
ತಮಿಳುನಾಡು ಸರ್ಕಾರದದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಜಯಕುಮಾರ್, ಕಮಲ್ ಹಾಸನ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ, ತಮಿಳು ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ, ಜೊತೆಗೆ ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಗ್ಗೆಯು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಯಲಲಿತಾ ಅವರು ಬದುಕಿದ್ದಾಗ ಕಮಲ್ ಹಾಸನ್ ಏಕೆ ಮೌನವಾಗಿದ್ದರು ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರ್ಯವಿದೆ ಎಂದು ಮಾಜಿ ಸಿಎಂ ಓ ಪನ್ನೀರ್ ಸೆಲ್ವಂ, ಕಮಲ್ ಹಾಸನ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ನಟನೊಬ್ಬನಿಗೆ ಬೆದರಿಕೆ ಹಾಕುವ ಮುನ್ನ ಅವರ ಹೇಳಿಕೆಗಳ ಬಗ್ಗೆ ಸಚಿವರು ಸೂಕ್ತ ಸಾಕ್ಷಿ ಪುರಾವೆ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಕಮಲ್ ಹಾಸನ್ ಹೇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಸಚಿವ ಸಿ.ವಿ ಷಣ್ಮುಗಂ ಹೇಳಿದ್ದಾರೆ.