ನವದೆಹಲಿ: ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಸಂಸದರ ವೇತನ ಮತ್ತು ಭತ್ಯೆ ಏರಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 7ನೇ ವೇತನ ಆಯೋಗದ ಅನುಷ್ಠಾನದ ನಂತರ ಕಾರ್ಯದರ್ಶಿಗಳಿಗಂತ ತಮ್ಮ ಸಂಬಳ ಕಡಿಮೆಯಾಗಿದೆ ಎಂದು ರಾಜ್ಯಸಭೆಯಲ್ಲಿ ನರೇಶ್ ಅಗರ್ ವಾಲ್ ವಿಷಯ ಪ್ರಸ್ತಾಪಿಸಿದ್ದಾರೆ.
ಸಂಸದರ ವೇತನ ಹಾಗೂ ಭತ್ಯೆ ಸಂಬಂಧ ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದೀಯ ಸಮಿತಿಯ ಶಿಫಾರಸ್ಸನ್ನು ಅನುಷ್ಠಾನಗೊಳಿಸುವಂತೆ ಕಳೆದ ವರ್ಷವೂ ಎಸ್ ಪಿ ಮುಖಂಡ ರಾಮ್ ಗೋಪಾಲ್ ಯಾದವ್ ಒತ್ತಾಯಿಸಿದ್ದರು.
ಸಂಸದರ ವೇತನ ಹಾಗೂ ಭತ್ಯೆಯನ್ನು ಶೇ. 100 ರಷ್ಟು ಏರಿಸಲು ಕೇಂದ್ರ ಒಪ್ಪಿತ್ತು. ಯೋಗಿ ಆದಿತ್ಯನಾಥ್ ನೇತೃತ್ವದ ಸಮಿತಿ ಶಿಫಾರಸ್ಸಿನಂತೆ ಸಂಸದರ ವೇತನ ಮತ್ತು ಭತ್ಯೆ ಏರಿಕೆಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಒಪ್ಪಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. 7ನೇ ವೇತನ ಆಯೋಗ ಜಾರಿಯಾದ ಮೇಲೆ ಕೇಂದ್ರ ಸಂಪುಟ ಕಾರ್ಯದರ್ಶಿಗಳ ಪ್ರತಿ ತಿಂಗಳ ವೇತನ ಎರಡೂವರೆ ಲಕ್ಷ ರು ಆಗಲಿದೆ.