ದೇಶ

ಪ್ರಧಾನಿ ಮೋದಿ 'ಮನ್ ಕೀ ಬಾತ್ 'ನಿಂದ ಆಕಾಶವಾಣಿಗೆ ಎರಡು ವರ್ಷದಲ್ಲಿ ರೂ. 10 ಕೋಟಿ ಆದಾಯ

Manjula VN
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಭಾಷಣ 'ಮನ್ ಕೀ ಬಾತ್' ನಿಂದ ಆಕಾಶವಾಣಿಗೆ 2 ವರ್ಷದಲ್ಲಿ ರೂ.10 ಕೋಟಿ ಆದಾಯ ಹರಿದುಬಂದಿದೆ.
2016-17ರಲ್ಲಿ ರೂ.5.19 ಕೋಟಿ  ಹಾಗೂ 2016-16ರಲ್ಲಿ ರೂ.4.78 ಕೋಟಿ ಆದಾಯವು ಆಕಾಶವಾವಣಿಗೆ ಈ ಕಾರ್ಯಕ್ರಮದ ಮೂಲಕ ಹರಿದುಬಂದಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಥನ ಸಿಂಗ್ ರಾಠೋಡ್ ಅವರು ಲೋಕಸಭೆಗೆ ಉತ್ತರ ನೀಡಿದ್ದಾರೆ. 
ಪ್ರಧಾನಿಯ ಮೂಲ ಹಿಂದಿ ಭಾಷಣವನ್ನು 18 ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಹಾಗೂ 33 ಉಪಭಾಷೆಗಳಲ್ಲಿ ಅದೇ ದಿನ ಪ್ರಸಾರ ಮಾಡುತ್ತಿದೆ. ಜೊತೆಗೆ ಇಂಗ್ಲಿಷ್, ಸಂಸ್ಕೃತ ಅವರತರಣಿಕೆ ಪ್ರಸಾರ ಮಾಡಲಾಗುತ್ತದೆ. 
ದೇಶದ ಜನತೆಗಾಗಿ ಟ್ರಾನ್ಸ್ ಮಿಟ್ಟರ್ ಗಳ ಮೂಲಕ ಹಾಗೂ ವಿಶ್ವದಾದ್ಯಂತ ಕೇಳುಗರಿಗಾಗಿ ಅಂತರ್ಜಾಲ ಹಾಗೂ ಶಾರ್ಟ್ ವೇವ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ರಾಠೋಡ್ ತಿಳಿಸಿದ್ದಾರೆ. 
2014 ಅಕ್ಟೋಬರ್ 3 ರಂದು ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು. ಪ್ರತೀ ತಿಂಗಳು ನಿರ್ದಿಷ್ಟ ಭಾನುವಾರದಂದು ಕಾರ್ಯಕ್ರಮ ಪ್ರಸಾರವಾಗುತ್ತದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ರಾಷ್ಟ್ರಹ ಹಾಗೂ ಸಮಾಜದ ಪ್ರಸ್ತುತ ಹಾಗುಹೋಗುಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಾರೆ. 2015ರ ಜನವರಿ ತಿಂಗಳಿನಲ್ಲಿಯೂ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಈ ಮೂಲಕ ಮೋದಿಯವರ ಮನ್ ಕಿ ಬಾತ್ ಕೇವಲ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಮೆಚ್ಚುಗೆಗಳಿಗೆ ಪಾತ್ರವಾಗಿದೆ. 
SCROLL FOR NEXT