ಸಾಂದರ್ಭಿಕ ಚಿತ್ರ 
ದೇಶ

ಕುರ್ಚಿ ತಂದ ಕಂಟಕ: ಸಚಿವರ ಕುರ್ಚಿಯಲ್ಲಿ ಕುಳಿತು ಸೆಲ್ಫಿ ತೆಗೆಸಿಕೊಂಡಿದ್ದ ವ್ಯಕ್ತಿಯ ಬಂಧನ

ಉತ್ತರ ಪ್ರದೇಶ ಶಿಕ್ಷಣ ಸಚಿವರ ಕುರ್ಚಿಯ ಮೇಲೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ಯುವಕನನ್ನು ಗುರುವಾರ...

ಲಖನೌ: ಉತ್ತರ ಪ್ರದೇಶ ಶಿಕ್ಷಣ ಸಚಿವರ ಕುರ್ಚಿಯ ಮೇಲೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ಯುವಕನನ್ನು ಗುರುವಾರ ಉತ್ತರಪ್ರದೇಶ ಪೊಲೀಸರ ಬಂಧಿಸಿದ್ದಾರೆ.
ಬಾರಾಬಂಕಿಯ ಅಜಯ್ ತಿವಾರಿ ಎಂಬ ಯುವಕ ತನ್ನ ಗೆಳೆಯರ ಜೊತೆ ಉತ್ತರ ಪ್ರದೇಶ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರನ್ನು ಭೇಟಿಯಾಗಲು ತೆರಳಿದ್ದ. ಈ ವೇಳೆ ಸಚಿವರ ಕೊಠಡಿಯಲ್ಲಿ ಇರಲಿಲ್ಲವಾಗಿತ್ತು, ಗೆಳೆಯರು ಹೊರಗಿದ್ದರು, ಆಗ ತಾನೊಬ್ಬನೇ ಇರುವುದನ್ನು ಕಂಡು ಆತನಿಗೊಂದು ಹುಚ್ಚು ಆಸೆ ಮೊಳಕೆಯೊಡೆದಿತ್ತು... ಕೂಡಲೇ ಆತ ಸಚಿವರ ಕುರ್ಚಿಯಲ್ಲಿ ಕುಳಿತು ಫೋಟೋ(ಸೆಲ್ಫಿ) ತೆಗೆದುಕೊಂಡಿದ್ದ.
ಬಳಿಕ ತಿವಾರಿ ಆ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿಬಿಟ್ಟಿದ್ದ. ವಿಪರ್ಯಾಸ ಎಂಬಂತೆ ಇದರಿಂದ ತಿವಾರಿಗೆ ಕಂಟಕ ಎದುರಾಗಿತ್ತು!
ಸಚಿವರ ಕೊಠಡಿಗೆ ತೆರಳಿ ಅವರ ಕುರ್ಚಿ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ಬಗ್ಗೆ ಜನರು ದೂರನ್ನು ನೀಡಿ, ಕಟುವಾಗಿ ಟೀಕಿಸಿದ್ದರು. ದೂರನ್ನು ಸ್ವೀಕರಿಸಿದ ನಂತರ ಸಿಂಗ್ ತನ್ನ ಕಾರ್ಯದರ್ಶಿ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ತಿವಾರಿಯನ್ನು ಬಂಧಿಸಿದ್ದರು.
ಸೈಬರ್ ಅಪರಾಧ ವಿಭಾಗದ ಪೊಲೀಸರು ಆರೋಪಿ ಅಜಯ್ ತಿವಾರಿಯನ್ನು ಬಂಧಿಸಿದ್ದು, ವಿಚಾರಣೆಗಾಗಿ ಹುಸೈನ್‌ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ