ದೇಶ

ಹಿಂದೂ ದೇವತೆಗಳನ್ನು ಆಲ್ಕೋಹಾಲ್ ಬ್ರಾಂಡ್ ಗೆ ಹೋಲಿಸಿದ ಸಂಸದ: ಸಂಸತ್ತಿನಲ್ಲಿ ಕೋಲಾಹಲ

Shilpa D
ನವದೆಹಲಿ: ಸಂಸತ್​ನ ಮೂರನೇ ದಿನದ ಅಧಿವೇಶನ ಹಲವು ಕೋಲಾಹಲಗಳಿಗೆ ಸಾಕ್ಷಿಯಾಯ್ತು. ಸಮಾಜವಾದಿ ಪಕ್ಷದ ಸಂಸದ ನರೇಶ್​ ಅಗರ್​ವಾಲ್​ ವಿವಾದಾತ್ಮಕ ಹೇಳಿಕೆಯಿಂದ ಸಂಸತ್ತಿನಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಯ್ತು.
ಗೋ ರಕ್ಷಣೆ ಹೆಸರಿನಲ್ಲಿ ದೇಶಾದ್ಯಂತ ದಾಳಿಗಳಾಗುತ್ತಿರುವ ಕುರಿತು ಪ್ರಸ್ತಾಪಿಸಿದ ಎಸ್​ಪಿ ಸಂಸದ ನರೇಶ್​ ಅಗರ್​ವಾಲ್​ ಹಿಂದೂ ಧರ್ಮದ ಪ್ರತಿಯೊಬ್ಬ ದೇವರನ್ನು ಮದ್ಯಪಾನದ ಬ್ರ್ಯಾಂಡ್​ಗಳಿಗೆ ಹೋಲಿಸಿದ್ರು..
1991 ರಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದಾಗ  ಗೋರಕ್ಷಣೆ ಹೆಸರಲ್ಲಿ ನಡೆದ ಹತ್ಯೆಯ ಬಗ್ಗೆ ಮಾತನಾಡುತ್ತಾ ಕೆಲ ಹಿಂದೂ ದೇವತೆಗಳ ಹೆಸರನ್ನು ಆಲ್ಕೋಹಾಲ್ ಬ್ರ್ಯಾಂಡ್ ಗೆ ಹೋಲಿಸಿ ಶಾಲೆಯ ಗೋಡೆಯ ಮೇಲೆ ಬರೆಯಲಾಗಿತ್ತು ಎಂದು ತಿಳಿಸಿದರು. ಕಜಾಂಚಿಗಳ ಬೆಂಚ್ ಕಡೆ ಕೈ ತೋರಿಸುತ್ತಾ ಇದನ್ನು ಬರೆದವರು ನಿಮ್ಮ ಜನಗಳು ಎಂದು ಹೇಳಿದರು. 
ಅಗರ್​ವಾಲ್​ ಹೇಳಿಕೆ ಖಂಡಿಸಿದ ಬಿಜೆಪಿ ನಾಯಕ ಅರುಣ್​ ಜೇಟ್ಲಿ ನೀವು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಿರಾ.  ಒಂದು ವೇಳೆ ಸಂಸತ್ತಿನ ಹೊರಗೆ ನೀವು ಈ ಹೇಳಿಕೆ ನೀಡಿದ್ದರೇ  ವಿಚಾರಣೆಗೆ ಒಳಪಡಬೇಕಾಗಿತ್ತು. ನಿಮ್ಮ ಹೇಳಿಕೆ ಖಂಡನೀಯ ನೀವು ಕ್ಷಮೆಯಾಚಿಸಬೇಕು ಎಂದು ಜೇಟ್ಲಿ ಆಗ್ರಹಿಸಿದರು.
ಅಗರ್ ವಾಲ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಉಪ ಸಭಾಪತಿ ಪಿಜೆ. ಕುರಿಯನ್ ಆಗ್ರಹಿಸಿದರು. ನನ್ನ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೇ ನಾನು  ಆ  ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ನರೇಶ್ ಅಗರ್ ವಾಲ್ ತಿಳಿಸಿದರು. 
ಸದನವನ್ನು ಎರಡು ಬಾರಿ ಮುಂದೂಡಿದ ಉಪ ಸಭಾಪತಿ ಕುರಿಯನ್ ನರೇಶ್ ಅಗರ್ ವಾಲ್ ಹೇಳಿಕೆಯನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಆಗ್ರಹಿಸದರು. 
SCROLL FOR NEXT