ನವದೆಹಲಿ: ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪಾವಾ ಶೆಲ್ ಗಳ Pelargonic Acid Vanillyl Amide (PAVA) ಬಳಕೆಗೆ ಅನುಮತಿ ನೀಡಿದ ನಂತರ ಇದೀಗ ಭದ್ರತಾ ಪಡೆಗಳು ಕ್ಯಾಪ್ಸಿಕಮ್ ಜೆಲ್ ಆಧಾರಿತ ಅಶ್ರುವಾಯು ಬಳಸಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಜಮ್ಮು-ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿ ಹಿಂಸಾಚಾರ ನಡೆಸುವ ಉದ್ರಿಕ್ತ ಗುಂಪಿನ ಮೇಲೆ ಈ ಅಶ್ರುವಾಯುವನ್ನು ಭದ್ರತಾ ಪಡೆಗಳು ಪ್ರಯೋಗಿಸಬಹುದಾಗಿದೆ.
ಭದ್ರತಾ ಪಡೆಗಳು ಈ ಹೊಸ ಅಶ್ರುವಾಯುವನ್ನು ಸ್ಪ್ರೇಯಾಗಿ ಅಥವಾ ಶೆಲ್ ಗಳ ಮಾದರಿಯಲ್ಲಿ ಕೂಡ ಬಳಸಬಹುದು. ಇದು ಮುಂದಿನ ತಿಂಗಳಿನಲ್ಲಿಯೇ ಬಳಕೆಗೆ ಸಿದ್ಧವಾಗಿರುತ್ತದೆ ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ದೇಶದಲ್ಲಿ ಯಾವುದೇ ಸ್ಥಳದಲ್ಲಿ ಕಾನೂನು, ಭದ್ರತೆಗೆ ಭಂಗ ಬಂದರೆ ಭದ್ರತಾ ಪಡೆಗಳು ಮಾರಣಾಂತಿಕವಾಗಿಲ್ಲದ ಯುದ್ಧಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಆದರೆ ಭಾರತದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕ ಪ್ರತಿಭಟನೆ, ಹಿಂಸಾಚಾರಗಳು ಆಗಾಗ ನಡೆಯುತ್ತಿರುವುದರಿಂದ ಇಂತಹ ಸಾಧನಗಳ ಬಳಕೆ ಅಲ್ಲಿ ಹೆಚ್ಚು ಬಳಕೆಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಈ ಮದ್ದು ಗುಂಡನ್ನು ಗಡಿ ಭದ್ರತಾ ಪಡೆಯ ಮಧ್ಯ ಪ್ರದೇಶದ ಟೆಕನ್ಪುರ್ ಮೂಲದ ಆಶ್ರುವಾಯು ಘಟಕ(ಟಿಎಸ್ ಯು) ಉತ್ಪಾದನೆ ಮಾಡುತ್ತದೆ.
ಕಳೆದ ವರ್ಷ ಇದೇ ಘಟಕ ಜಮ್ಮು-ಕಾಶ್ಮೀರದ ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಪಾವಾ ಆಶ್ರುವಾಯು ಸಾಮಗ್ರಿಯನ್ನು ಪರಿಚಯಿಸಿತ್ತು. ಪಾವಾ ಶೆಲ್ ಗಳನ್ನು ಪೊಲೀಸರು ಮತ್ತು ಭದ್ರತಾ ಪಡೆ ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ಹೇಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos