ನವದೆಹಲಿ: ಚೆನ್ನೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದ ಆಹಾರದ ಟ್ರಾಲಿಯಲ್ಲಿ ಡ್ರಗ್ಸ್ ಪಾಕೆಟ್ ಪತ್ತೆಯಾಗಿದೆ.
ಆಹಾರ ವಿತರಿಸಿರುವ ಟ್ರಾಲಿಯಲ್ಲಿ ಪಾಕೆಟ್ ಪತ್ತೆಯಾಗಿದ್ದು, ಡ್ರಗ್ಸ್ ಪಾಕೆಟ್ ವಿಮಾನದ ಟ್ರಾಲಿಯೊಳದೆ ಹೇಗೆ ಬಂತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಏರ್ ಇಂಡಿಯಾ ಸಿಬ್ಬಂದಿ ಸಹಾಯವಿಲ್ಲದೇ ಡ್ರಗ್ಸ್ ಪಾಕೆಟ್ ವಿಮಾನದೊಳಗೆ ಬಂದದ್ದಾದರೂ ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಚೆನ್ನೈನಿಂದ ಬಂದ ಏರ್ ಇಂಡಿಯ-440 ವಿಮಾನದಲ್ಲಿ ಡ್ರಗ್ಸ್ ಪಾಕೆಟ್ ಪತ್ತೆಯಾಗಿದೆ. ಮತ್ತೊಂದು ಆಸಕ್ತಿದಾಯಕ ವಿಷಯ ಏನೆಂದರೇ ಆಹಾರದ ಟ್ರಾಲಿ ಲೋಡ್ ಆಗಿರುವುದು ಚೆನ್ನೈನಲ್ಲಿ, ಇದು, ಕ್ಯಾಬಿನ್ ಸಿಬ್ಬಂದಿ, ಏರ್ ಲೈನ್ಸ್ ನೌಕರರಿಗೆ ಮಾತ್ರ ಸುಲಭವಾಗಿ ದೊರಕಬಹುದಾಗಿದೆ.
ಈ ಪಾಕೆಟ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 1895 ಗ್ರಾಂ ಮಾರ್ಫಿನ್ ಎಂಬ ಡ್ರಗ್ಸ್ ಪತ್ತೆಯಾಗಿದೆ. ಮತ್ತಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.