ದೇಶ

ಭಾರತ ಗಡಿಯಲ್ಲಿನ ಕಾರ್ಯತಂತ್ರ ನಿಗ್ರಹಿಸಿದರೆ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ: ಚೀನಾ ಮಾಧ್ಯಮ

Srinivas Rao BV
ಬೀಜಿಂಗ್: ಭಾರತ ಗಡಿ ಪ್ರದೇಶದಲ್ಲಿನ ತನ್ನ ಕಾರ್ಯತಂತ್ರ ನಿಗ್ರಹಿಸಿದರೆ ಏಷ್ಯಾ ಕೇಂದ್ರಿತ ಟ್ರೇಡ್ ಡೀಲ್ ಆಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಭಿವೃದ್ಧಿಗೆ ಸಹಕಾರ ದೊರೆಯಲಿದೆ ಎಂದು ಚೀನಾ ಮಾಧ್ಯಮ ಹೇಳಿದೆ. 
ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ಚೀನಾ-ಭಾರತದ ಗಡಿಯಲ್ಲಿ ಉಂಟಾಗಿರುವ ವಿವಾದದ ಕುರಿತು ಲೇಖನ ಪ್ರಕಟಿಸಿದ್ದು, ಆರ್ ಸಿಇಪಿಗೆ ತೊಡಕಾಗಿರುವ ಗಡಿಯಲ್ಲಿನ ಕಾರ್ಯತಂತ್ರಗಳನ್ನು ಭಾರತ ನಿಗ್ರಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದೆ. 
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಭಿವೃದ್ಧಿ(ಆರ್ ಸಿಇಪಿ) ಗೆ ಸಂಬಂಧಿಸಿದಂತೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 16 ರಾಷ್ಟ್ರಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎಸ್ಇಎಎನ್ ನ 10 ಸದಸ್ಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಆರ್ ಸಿಇಪಿ ಆಗಿದ್ದು, ಭಾರತ ಗಡಿಯಲ್ಲಿನ ತನ್ನ ಕಾರ್ಯತಂತ್ರಗಳನ್ನು ನಿಗ್ರಹಿಸಿದರೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಚೀನಾ ಮಾಧ್ಯಮ ಅಭಿಪ್ರಾಯಪಟ್ಟಿದೆ. 
ಚೀನಾ ಮತ್ತು ಭಾರತ ಆರ್ ಸಿಇಪಿಯ ಎರಡು ಪ್ರಮುಖ ದೇಶಗಳಾಗಿದ್ದು, ವ್ಯಾಪಾರ ಒಪ್ಪಂದಗಳು ಸುಗಮವಾಗಿ ನಡೆಯುವುದಕ್ಕೆ ಭಾರತ-ಚೀನಾ ನಡುವಿನ ಗಡಿ ವಿವಾದ ಅಡ್ಡಿಯಾಗಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. 
SCROLL FOR NEXT