ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೆಲವೇ ದಿನಗಳಲ್ಲಿ ಚೀನಾಗೆ ಭೇಟಿ ನೀಡಲಿದ್ದು, ಅಜಿತ್ ದೋವಲ್ ಅವರ ಭೇಟಿಯಿಂದ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿದೆ ಎನ್ನುತ್ತಿದ್ದಾರೆ ಚೀನಾದ ವಿಶ್ಲೇಷಕರು.
ಜು.27-28 ರಂದು ಅಜಿತ್ ದೋವಲ್ ಚೀನಾಗೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಚೀನಾದ ವಿಶ್ಲೇಷಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಜಿತ್ ದೋವಲ್ ಭೇಟಿಯಿಂದ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳ ಎನ್ಎಸ್ಎ ಗಳ ಸಭೆಯಲ್ಲಿ ಅಜಿತ್ ದೋವಲ್ ಭಾಗವಹಿಸಲಿದ್ದು, ಚೀನಾದ ಎನ್ಎಸ್ಎ ಜೊತೆಗೂ ಮಾತುಕತೆ ನಡೆಸಲಿದ್ದಾರೆ, ದೋವಲ್ ಅವರ ಈ ಭೇಟಿ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಹಕಾರಿಯಾಗಿದೆ ಎಂದು ಚೀನಾ ವಿಶ್ಲೇಷಕರು ಅಭಿಪ್ರಾಯಪಟ್ಟಿರುವುದನ್ನು ಗ್ಲೋಬಲ್ ಟೈಮ್ಸ್ ಲೇಖನವೊಂದರಲ್ಲಿ ಪ್ರಕಟಿಸಿದೆ.