ನ್ಯೂಯಾರ್ಕ್: ಪ್ರಸಕ್ತ ಸಾಲಿನಲ್ಲಿ ಭಾರತ ಶೇ.7.5 ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅತ್ಯುತ್ತಮ ಉದ್ಯೋಗಗಳನ್ನು ಸೃಷ್ಟಿಸುವುದು ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಇದೇ ವೇಳೆ ಪನಗಾರಿಯಾ ಒಪ್ಪಿಕೊಂಡಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ (2017-18) ರಲ್ಲಿ ಶೇ.7.5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದ್ದೇವೆ, ವರ್ಷದ ಕೊನೆಯ ತ್ರೈಮಾಸಿಕದ ವೇಳೆಗೆ ಶೇ.8 ರ ಹತ್ತಿರ ತಲುಪುತ್ತೇವೆ ಎಂದು ಪನಗಾರಿಯಾ ಹೇಳಿದ್ದಾರೆ.
ಕಳೆದ ವಾರ ಅರವಿಂದ್ ಪನಗಾರಿಯಾ, ಕಳೆದ ವಾರ ವಿಶ್ವ ಸಂಸ್ಥೆಯ ಉನ್ನತ ಮಟ್ಟದ ರಾಜಕೀಯ ವೇದಿಕೆಯಲ್ಲಿ ಸಮರ್ಥನೀಯ ಅಭಿವೃದ್ಧಿ ಗುರಿಗಳ ಬಗ್ಗೆ ಭಾರತದ ರಾಷ್ಟ್ರೀಯ ವಿಮರ್ಶಾತ್ಮಕ ವರದಿಯನ್ನು ಮಂಡಿಸಿದ್ದರು. ಈ ವೇಳೆ ಪ್ರಸಕ್ತ ಸಾಲಿನಲ್ಲಿ (2017-18) ರಲ್ಲಿ ಶೇ.7.5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದ್ದೇವೆ ಎಂದು ಹೇಳಿದ್ದರು. ಈಗ ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿಯೂ ಭಾರತ ಶೇ.7.5 ರಷ್ಟು ಬೆಳವಣಿಗೆ ದಾಖಲಿಸುವ ಸಾಧ್ಯತೆ ಎಂದು ಹೇಳಿದ್ದಾರೆ.