ಪ್ರತ್ಯೇಕ ಭಾವುಟ ಕುರಿತು ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ: ಬಿಜೆಪಿ
ರಾಜ್ಯಗಳು ಪ್ರತ್ಯೇಕ ಭಾವುಟ ಹೊಂದುವುದಕ್ಕೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿಕೆ ಬೆನ್ನಲ್ಲೇ ಇದೀಗ ತಮ್ಮ ನಿಲುವನ್ನು...
ನವದೆಹಲಿ: ರಾಜ್ಯಗಳು ಪ್ರತ್ಯೇಕ ಭಾವುಟ ಹೊಂದುವುದಕ್ಕೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿಕೆ ಬೆನ್ನಲ್ಲೇ ಇದೀಗ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬಿಜೆಪಿ ಆಗ್ರಹಿಸಿದೆ.
ಈ ವಿಷಯವಾಗಿ ಸೋನಿಯಾ ಗಾಂಧಿಯವರು ಅವರು ಮಾತನಾಡಲೇಬೇಕು. ಬೆಂಗಳೂರು ಮತ್ತು ಇತರ ನವದೆಹಲಿಯಲ್ಲಿ ಒಂದು ಸ್ಥಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಬೂಟಾಟಿಕೆ ಮುಂದುವರಿಸಲು ನಾವು ಅವರನ್ನು ಅನುಮತಿಸುವುದಿಲ್ಲ ಎಂದು ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾಮ್ ಅವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಲ್ಕುವರೆ ವರ್ಷದ ಅವಧಿಯಲ್ಲಿ ಎಲ್ಲಾ ರಂಗಗಳಲ್ಲಿಯೂ ವಿಫಲರಾಗಿದ್ದು, ಇದೀಗ ಪ್ರತ್ಯೇಕ ಭಾವುಟ ವಿಚಾರವನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಗಮನವನ್ನು ಬೇರೆಡೆ ತಿರುಗಿಸುತ್ತಿದ್ದಾರೆ ಎಂದು ರಾವ್ ಹೇಳಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ಚಿಹ್ನೆ ಮತ್ತು ಗುರುತು ಇರಬೇಕು ಎಂಬ ಉದ್ದೇಶದಿಂದ ಒಂಬತ್ತು ಮಂದಿಯ ಸಮಿತಿಯೊಂದನ್ನು ರಚಿಸಿ, ಧ್ವಜ ವಿನ್ಯಾಸ ಮಾಡುವಂತೆ ಸೂಚಿಸಿತ್ತು.