ಬೀಜಿಂಗ್: ಚೀನಾದ ಹಿತಾಸಕ್ತಿಗಳನ್ನು ಗೌರವಿಸುವಂತೆ ಆಫ್ರಿಕಾದ ರಾಷ್ಟ್ರಕ್ಕೆ ಚೀನಾ ಆಗ್ರಹಿಸಿದೆ. ದಲೈ ಲಾಮ ಅವರನ್ನು ಪ್ರತ್ಯೇಕತಾವಾದಿ ಎಂದು ಚೀನಾ ಹೇಳುತ್ತಿದ್ದು, ಬೋಟ್ಸ್ವಾನಾದ ರಾಜಧಾನಿಯಲ್ಲಿ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಆ.17-19 ರಂದು ದಲೈ ಲಾಮ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾ ಎಚ್ಚರಿಕೆ ನೀಡಿದೆ.
ಚೀನಾ ಬೋಟ್ಸ್ವಾನಾ ಆರ್ಥಿಕತೆಗೆ ಪೂರಕವಾಗಿದ್ದು, ಹೆಚ್ಚಿನ ಹೂಡಿಕೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಚೀನಾ ಎಚ್ಚರಿಕೆ ಮಹತ್ವ ಪಡೆದುಕೊಂಡಿದೆ. ದಲೈ ಲಾಮ ಅವರ ಭೇಟಿಯ ವಿಷಯ ಚೀನಾದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದ ಹಿತಾಸಕ್ತಿಗಳನ್ನು ಗೌರವಿಸುವಂತೆ ಆಫ್ರಿಕಾದ ರಾಷ್ಟ್ರಕ್ಕೆ ಚೀನಾ ಆಗ್ರಹಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್ ಹೇಳಿದ್ದಾರೆ.