ದೇಶ

2000 ರೂ. ನೋಟು ಮುದ್ರಣ ನಿಲ್ಲಿಸಿದ ಆರ್ ಬಿಐ; ಆಗಸ್ಟ್‌ನಲ್ಲಿ 200 ರೂ. ನೋಟು ಚಲಾವಣೆಗೆ?

Vishwanath S
ನವದೆಹಲಿ: ಕಳೆದ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸುತ್ತಿನ ಕರೆನ್ಸಿ ಸರ್ಜರಿಗೆ ಮುಂದಾಗಿದೆ. 
ನಗದು ವಹಿವಾಟನ್ನು ಸಂಪೂರ್ಣ ಸಹಜ ಸ್ಥಿತಿಗೆ ಮರಳಿಸುವ ಉದ್ದೇಶದಿಂದ 200 ರು. ಮುಖಬೆಲೆಯ ಹೊಸ ನೋಟುಗಳನ್ನು ಮುಂದಿನ ತಿಂಗಳೇ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನಿರ್ಧರಿಸಿದೆ. 
ನೋಟು ನಿಷೇಧದ ಬಳಿಕ 2000 ಸಾವಿರ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ತಂದಿತ್ತು. ಸಣ್ಣ ಮೊತ್ತದ ಅಗತ್ಯ ಸಾಮಗ್ರಿಗಳನ್ನು ಖರೀದಿಸುವವರಿಗೆ 2 ಸಾವಿರ ರು.ಗೆ ಚಿಲ್ಲರೆ ಸಮಸ್ಯೆ ಕಾಡುತ್ತಿದೆ. ಈ ನಿಟ್ಟಿನಲ್ಲಿ 200 ರು. ಮುಖಬೆಲೆಯ ನೋಟು ಬಿಡುಗಡೆಯಾದರೆ ಈ ಸಮಸ್ಯೆ ನಿವಾರಣೆ ಆಗಲಿದೆ. 500 ರು. ಹಾಗೂ 2000 ರು. ನೋಟುಗಳ ನಡುವಿನ ಅಂತರದಿಂದಾಗಿ ಉಂಟಾಗಿರುವ ಚಿಲ್ಲರೆ ಸಮಸ್ಯೆ ನಿವಾರಿಸುವುದಕ್ಕಾಗಿಯೇ ಆರ್ಬಿಐ 200 ರು. ನೋಟು ಬಿಡುಗಡೆಗೆ ನಿರ್ಧರಿಸಿದೆ ಎನ್ನಲಾಗಿದೆ. 
2000 ನೋಟು ಮುದ್ರಣ ಸ್ಥಗಿತ
2 ಸಾವಿರ ರು. ನೋಟುಗಳ ಚಲಾವಣೆ ಮುಂದುವರಿಕೆ ಬಗ್ಗೆ ಪ್ರಶ್ನೆಗಳು ಎದ್ದಿರುವಂತೆಯೇ ಆರ್ಬಿಐ 5 ತಿಂಗಳ ಮೊದಲೇ 2 ಸಾವಿರ ರು. ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತೆ 2 ಸಾವಿರ ರು.ಗಳ ಹೊಸ ನೋಟು ಮುದ್ರಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
SCROLL FOR NEXT