ಟಾಲಿವುಡ್ ನಟ ರವಿತೇಜ 
ದೇಶ

ಟಾಲಿವುಡ್ ಡ್ರಗ್ಸ್ ಪ್ರಕರಣ: ಎಸ್ಐಟಿಯಿಂದ ನಟ ರವಿ ತೇಜ ವಿಚಾರಣೆ

ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ರವಿತೇಜ ಅವರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ವಿಚಾರಣೆಗೊಳಪಡಿಸಿದ್ದಾರೆ...

ಹೈದರಾಬಾದ್: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ರವಿತೇಜ ಅವರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ವಿಚಾರಣೆಗೊಳಪಡಿಸಿದ್ದಾರೆ. 
ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗಾಗಿ ತೆಲಂಗಾಣದ ಅಬಕಾರಿ ಭವನಕ್ಕೆ ಹಾಜರಾದ ರವಿ ತೇಜ ಅವರನ್ನು ವಿಶೇಷ ತನಿಖಾ ದಳದ ನಾಲ್ಕು ಸದಸ್ಯರ ತಂಡ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿರುವ ಕೆಲ್ವಿನ್ ಮೊಬೈಲ್ ಕಾಲ್ ಡಾಟಾದಲ್ಲಿ ಈ ಹಿಂದೆ ನಟ ರವಿತೇಜ ಅವರ ಅವರ ಫೋನ್ ನಂಬರ್ ಇರುವುದು ಬಹಿರಂಗಗೊಂಡಿತ್ತು. ವಿಚಾರಣೆ ವೇಳೆಯೂ ಕೆಲ್ವಿನ್ ರವಿತೇಜ ಅವರ ಹೆಸರನ್ನು ಹೇಳಿದ್ದರಿಂದಾಗಿ ರವಿತೇಜಾ ಅವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್ ಜಾರಿಯಾದ ಹಿನ್ನಲೆಯಲ್ಲಿ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದ ರವಿತೇಜ ಅವರು 2 ದಿನಗಳ ಹಿಂದೆಯೇ ಹೈದರಾಬಾದ್'ಗೆ ಆಗಮಿಸಿದ್ದರು. ಇದರಂತೆ ಇಂದು ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ರವಿತೇಜ್ ಅವರು ತಮ್ಮ ವಕೀಲರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಈ ವರೆಗೂ 9 ಪ್ರಮುಖ ಟಾಲಿವುಡ್ ನಟ, ನಟಿ ಹಾಗೂ ನಿರ್ದೇಶಕರ ಹೆಸರುಗಳು ಕೇಳಿಬಂದಿವೆ. ಕಳೆದೆರಡು ದಿನಗಳ ಹಿಂದೆ ನಟಿ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್