ಸಾಂದರ್ಭಿಕ ಚಿತ್ರ 
ದೇಶ

ಕಳೆದ 10 ವರ್ಷಗಳಲ್ಲಿ ಬಾಲ್ಯ ವಿವಾಹಕ್ಕೊಳಗಾದ ಮಕ್ಕಳ ಸಂಖ್ಯೆ 29 ಲಕ್ಷ!

2001ರಿಂದ 2011ರವರೆಗೆ ದೇಶದಲ್ಲಿ 10ರಿಂದ 14 ವರ್ಷದವರೆಗಿನ ಸುಮಾರು 29 ಲಕ್ಷ ಮಕ್ಕಳು...

ನವದೆಹಲಿ: 2001ರಿಂದ 2011ರವರೆಗೆ ದೇಶದಲ್ಲಿ 10ರಿಂದ 14 ವರ್ಷದವರೆಗಿನ ಸುಮಾರು 29 ಲಕ್ಷ ಮಕ್ಕಳು ಬಾಲ್ಯ ವಿವಾಹವಾಗಿದ್ದಾರೆ ಎಂದು ಮಕ್ಕಳ ಹಕ್ಕುಗಳ ಆಯೋಗ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
2011ರ ಜನಗಣತಿ ಆಧಾರದ ಮೇಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ವರದಿಯನ್ನು ನೀಡಿದೆ. ವಿವಾಹದ ಪ್ರಾಬಲ್ಯ, ಅವುಗಳ ಮೂಲ ಮತ್ತು ಭೌಗೋಳಿಕ ವಿಸ್ತರಣೆಗಳ ಸಾಂಖ್ಯಿಕ ವಿಶ್ಲೇಷಣೆಯನ್ನು ನೀಡಿದೆ. ಈ ವರದಿಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ.ಕೆ.ಸಿಕ್ರಿ ಬಿಡುಗಡೆ ಮಾಡಿದರು.
ಬಾಲ್ಯ ವಿವಾಹ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದ್ದರೂ ಕೂಡ 2001ರಿಂದ 2011ರವರೆಗೆ ನಮ್ಮ ದೇಶದಲ್ಲಿ 1.1 ದಶಲಕ್ಷ ಬಾಲಕರು ಮತ್ತು 1.8 ದಶಲಕ್ಷ ಬಾಲಕಿಯರು ವಿವಾಹವಾಗಿದ್ದಾರೆ. ಇವರೆಲ್ಲರೂ 10ರಿಂದ 14 ವರ್ಷದೊಳಗಿನವರು ಎಂದು ಹೇಳಲಾಗಿದೆ.
ಬಾಲ್ಯ ವಿವಾಹ ಮಕ್ಕಳ ಗೌರವ ಮತ್ತು ಘನತೆಯನ್ನು ಉಲ್ಲಂಘಿಸಿ ಮಾನವ ಹಕ್ಕುಗಳ ಘನಘೋರ ಉಲ್ಲಂಘನೆಯಾಗಿದೆ. ದೇಶದ ವಿವಿಧ ಕಾನೂನುಗಳಲ್ಲಿ ಮಕ್ಕಳ ವಿವಾಹ ಬಗ್ಗೆ ಬಹಳಷ್ಟು ಅಸಂಗತತೆಯಿದೆ. ಕಾನೂನು ಪಾಲಕರು, ನ್ಯಾಯಾಧೀಶರು ಈ ವ್ಯತ್ಯಾಸಗಳನ್ನು ಗುರುತಿಸಿ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗನ್ನು ತೊಲಗಿಸಬೇಕು. ರಾಷ್ಟ್ರೀಯ ಮಾನವ ಹಕ್ಕು ಆಯೋಗವು ರಾಷ್ಟ್ರೀಯ ಕಾನೂನು ಸೇವೆ ಪ್ರಾಧಿಕಾರದ ಜೊತೆ ಕೈ ಜೋಡಿಸಿ ಅರೆ ಕಾನೂನು ಕಾರ್ಯಕರ್ತರ ಜೊತೆಗೆ ನಿಗದಿತ ರಾಜ್ಯಗಳಲ್ಲಿ ಸೆಮಿನಾರ್ ಗಳನ್ನು ನಡೆಸಬೇಕು ಎಂದು ನ್ಯಾಯಮೂರ್ತಿ ಸಿಕ್ರಿ ಹೇಳಿದರು.
2011ರ ಜನಗಣತಿಯಲ್ಲಿ ಬಾಲ್ಯ ವಿವಾಹ ಅತಿ ಹೆಚ್ಚಾಗಿರುವ ದೇಶದ 13 ರಾಜ್ಯಗಳ 70 ಜಿಲ್ಲೆಗಳನ್ನು ಗುರುತಿಸಲಾಗಿದೆ. ಈ ರಾಜ್ಯಗಳೆಂದರೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಹರ್ಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಾಗಿವೆ.
ಕರ್ನಾಟಕದ ದಾವಣಗೆರೆ, ಆಂಧ್ರ ಪ್ರದೇಶ, ಗುಜರಾತ್, ರಾಜಸ್ತಾನದ ಕೆಲವು ಜಿಲ್ಲೆಗಳಲ್ಲಿ ಬಾಲ್ಯ ವಿವಾಹಕ್ಕೊಳಗಾಗುವ ಬಾಲಕಿಯರ ಸಂಖ್ಯೆ ಹೆಚ್ಚಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!