ನವದೆಹಲಿ: ರಿಕ್ಟರ್ ಮಾಪಕದಲ್ಲಿ 5.0 ಮಧ್ಯಮ ತೀವ್ರತೆಯ ಭೂಕಂಪ ಇಂದು ನಸುಕಿನ ಜಾವ 4.25ರ ಸುಮಾರಿಗೆ ಸಂಭವಿಸಿದೆ. ಇದರ ಪರಿಣಾಮ ದೆಹಲಿ ಮತ್ತು ಉತ್ತರ ಭಾರತ ಭಾಗದಲ್ಲಿ ಉಂಟಾಗಿದೆ.
ಭೂಕಂಪದ ಕೇಂದ್ರ ಭಾಗ ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದ ತೀವ್ರತೆ 22 ಕಿಲೋ ಸುತ್ತಮುತ್ತ ವ್ಯಾಪಿಸಿತ್ತು.
ಯಾವುದೇ ರೀತಿಯ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.