ಸೈಯದ್ ಅಬ್ದುಲ್ ರಹಮಾನ್ (ಸಂಗ್ರಹ ಚಿತ್ರ) 
ದೇಶ

ಖ್ಯಾತ ತಮಿಳು ಕವಿ ಅಬ್ದುಲ್ ರಹಮಾನ್ ನಿಧನ

ತಮಿಳಿನ ಖ್ಯಾತ ಕವಿ ಸೈಯದ್ ಅಬ್ದುಲ್ ರಹಮಾನ್ ಇಂದು ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ...

ಚೆನ್ನೈ: ತಮಿಳಿನ ಖ್ಯಾತ ಕವಿ ಸೈಯದ್ ಅಬ್ದುಲ್ ರಹಮಾನ್ ಇಂದು ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ಮೂತ್ರ ಸೋಂಕಿನಿಂದ ಬಳಲುತ್ತಿದ್ದರು. 
ಅವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಂತಿಮ ವಿಧಿ ವಿಧಾನ ನಾಳೆ ನಡೆಯಲಿದೆ.
ಮಧುರೈಯಲ್ಲಿ ನವೆಂಬರ್ 2, 1937ರಲ್ಲಿ ಜನಿಸಿದ ರಹಮಾನ್ ವನಿಯಂಬಡಿಯ ಇಸ್ಮಾಯ ಕಾಲೇಜಿನಲ್ಲಿ 29 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಪುದುಕವಿತೈ ಮಾದರಿಯ(ಮುಕ್ತ ಗೀತೆಗಳು) ಕವಿತೆ ಬರೆಯುವುದರಲ್ಲಿ ಅವರು ಖ್ಯಾತರಾಗಿದ್ದಾರು.
ವನ್ನಂಬಾಡಿ ಸಾಹಿತ್ಯ ಚಳವಳಿಗೆ ಸೇರಿದವರಾಗಿದ್ದರು. 1999ರಲ್ಲಿ ಅವರ ಕವಿತೆ ಸಂಗ್ರಹ ಆಲಪನೈಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. 
ಅವರು ಕವಿಕ್ಕೊ ಅಬ್ದುಲ್ ರಹಮಾನ್ ಎಂದು ಖ್ಯಾತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!