ಪರೀಕ್ಷೆ ಬರೆದ ರಾಜ್ ಕುಮಾರ್ ವೈಶ್ಯ
ಪಾಟ್ನಾ: ಅಂದು ವಿಪರೀತ ಬಿಸಿಲು, ರಾಜ್ ಕುಮಾರ್ ವೈಶ್ಯ ಅವರಿಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ.ಆದರೆ ಸ್ನಾತಕೋತ್ತರ ಪದವಿ ಮಾಡಲೇಬೇಕೆಂಬ ಹಠ, ಗುರಿ ಅವರನ್ನು 97ನೇ ಇಳಿ ವಯಸ್ಸಿನಲ್ಲಿಯೂ ಎಂ.ಎ ಪರೀಕ್ಷೆಗೆ ತಮ್ಮ ಮೊಮ್ಮಕ್ಕಳ ವಯಸ್ಸಿನವರ ಜೊತೆ ಮೂರು ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದೆ.
1938ನೇ ಇಸವಿಯಲ್ಲಿ ಪದವಿ ಶಿಕ್ಷಣ ಮುಗಿಸಿದ ವೈಶ್ಯ ತಮ್ಮ ಅರ್ಥಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿಯನ್ನು ನಳಂದಾ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾಡಿದ್ದಾರೆ. ಮೊನ್ನೆ ಗುರುವಾರ ಪರೀಕ್ಷೆ ಆರಂಭವಾಗಿದ್ದು ಮುಂದಿನ ವಾರದವರೆಗೆ ಮುಂದುವರಿಯಲಿದೆ.
ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆದಿರುವ ವೈಶ್ಯ ಸುಮಾರು 12 ಹಾಳೆಗಳನ್ನು ಬಳಸಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂದು ವೈಶ್ಯ ಅವರು ಕಳೆದ ವರ್ಷ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದರು.
ಸೋಲಿನಿಂದ ಎಂದಿಗೂ ಇಂದಿನ ಯುವ ಜನತೆ ಕಂಗೆಡಬಾರದು. ನಮ್ಮಲ್ಲಿ ನಮಗೆ ನಂಬಿಕೆಯಿದ್ದರೆ ಖಂಡಿತಾ ಜೀವನದಲ್ಲಿ ಗೆಲುವು ಸಾಧಿಸಬಹುದು ಎನ್ನುತ್ತಾರೆ ವೈಶ್ಯ.
10ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ತಮ್ಮ 82 ನೇ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪಾಸ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics