ಮೇಘಾಲಯ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋಹತ್ಯಾ ನಿಷೇಧವನ್ನು ವಿರೋಧಿಸಿ ಮೇಘಾಲಯದ ಮತ್ತೋರ್ವ ಬಿಜೆಪಿ ನಾಯಕ ಪಕ್ಷವನ್ನು ತೊರೆದಿದ್ದಾರೆ.
ನಾರ್ತ್ ಗಾರೋ ಹಿಲ್ಸ್ ನ ಜಿಲ್ಲಾಧ್ಯಕ್ಷ ಬಾಚು ಮಾರಕ್ ಬಿಜೆಪಿ ತೊರೆದ ನಾಯಕನಾಗಿದ್ದು, ಬಿಜೆಪಿ ಮೇಘಾಲಯದ ಜನತೆ ಮೇಲೆ ಜಾತ್ಯಾತೀತವಲ್ಲದ ಸಿದ್ಧಾಂತವನ್ನು ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಬೀಫ್ ನೀತಿಯನ್ನು ವಿರೋಧಿಸಿ ಇತ್ತೀಚೆಗಷ್ಟೇ ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ನ ಬಿಜೆಪಿ ಜಿಲ್ಲಾಧ್ಯಕ್ಷರೊಬ್ಬರು ರಾಜೀನಾಮೆ ನೀಡಿದ್ದರು.
ಗೋಮಾಂಸ ನಮ್ಮ ಸಾಂಪ್ರದಾಯಿಕ ಆಹಾರವಾಗಿದ್ದು, ಜವಾಬ್ದಾರಿಯುತ ನಾಯಕನಾಗಿ ಬಿಜೆಪಿಯ ಜಾತ್ಯಾತೀತವಲ್ಲದ ಸಿದ್ಧಾಂತವನ್ನು ಒಪ್ಪಿಕೊಂಡು ನಾನು ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾರಕ್ ಹೇಳಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಶಿಬುನ್ ಮಾರಕ್ ಹೇಳಿಕೆ, ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಬಿಜೆಪಿ ಸಾಂವಿಧಾನಿಕ ವಿರುದ್ಧವಾದ ಕ್ರಮಗಳನ್ನು ಜನರ ಮೇಲೆ ಹೇರುತ್ತಿಲ್ಲ. ಮಾರಕ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics