ದೇಶ

ಕೇಜ್ರಿವಾಲ್ ನಿವಾಸದಲ್ಲಿ ಹೈಡ್ರಾಮಾ: ಸಿಎಂ ಜನತಾ ದರ್ಬಾರ್ ನಿಂದ ಹೊರದಬ್ಬಿಸಿಕೊಂಡ ಕಪಿಲ್ ಮಿಶ್ರಾ

Shilpa D
ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಯಾಗಿರುವ ಕಪಿಲ್ ಮಿಶ್ರಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದೊಳಗೆ ತೆರಳುವುದಕ್ಕೆ ಅನುಮತಿ ನಿರಾಕರಿಸಲಾಗಿದೆ.
ಕೇಜ್ರಿವಾಲ್ ನಿವಾಸ ಜನತಾ ದರ್ಬಾರ್ ಗೆ ಕಪಿಲ್ ಮಿಶ್ರಾ ತಮ್ಮ ಆಪ್ತರೊಡನೆ ತೆರಳಿದ್ದರು. ತಾವು ಕೇಜ್ರಿವಾಲ್ ಅವರನ್ನು ಭೇಟಿ ಮಾಡುವುದಕ್ಕಾಗಿ ಹೋಗುತ್ತಿರುವುದಾಗಿ ಹೇಳಿದ್ದರು.
ಆದರೆ ಅವರು ಒಳಗೆ ಹೋಗಲು ಬಿಡದೇ ಬಾಗಿಲಲ್ಲಿಯೇ ಅವರನ್ನು ತಡೆಯಲಾಯಿತು. ತಾವು ಕೇಜ್ರಿವಾಲ್ ರನ್ನು ಭೇಟಿ ತಮ್ಮನ್ನು ವಜಾ ಮಾಡಿದ ಪಕ್ಷ ಇನ್ನೂ ಏಕೆ ಸತ್ಯೇಂದ್ರ ಜೈನ್ ಅವರನ್ನು ವಜಾ ಮಾಡಿಲ್ಲ ಎಂದು ಪ್ರಶ್ನಿಸಲು ಆಗಮಿಸಿದ್ದರು.
ಆದರೆ ಸಿಎಂ ನಿವಾಸಕ್ಕೆ ಹೋಗಲು ಅನುಮತಿ ನೀಡದ ಕಾರಣ ಮಿಶ್ರಾ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಇನ್ನೂ ಸತ್ಯೇಂದ್ರ ಜೈನ್ ವಿರುದ್ದ ಮತ್ತೆ ಹೊಸ ಆರೋಪ ಮಾಡಿರುವ ಕಪಿಲ್ ಮಿಶ್ರಾ, 2013 ರಿಂದ 2016 ರ ನಡುವೆ ಜೈನ್ ದೆಹಲಿಯ ಗ್ರಾಮಾಂತರ ಭಾಗದಲ್ಲಿ ಸುಮಾರು 80 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.
SCROLL FOR NEXT