ಚೆನ್ನೈ: ತಮಿಳುನಾಡಿನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಬಾಂಬ್ ಪಾರ್ಸಲ್ ಬಂದಿದೆ.
ಬೆದರಿಕೆ ಪತ್ರದೊಂದಿಗೆ ಗನ್ ಪೌಡರ್, ಹಾಗೂ ಬಾಂಬ್ ಗೆ ಸಂಬಂಧಿಸಿದ ಇತರ ಉಪಕರಣಗಳನ್ನು ಬಿಜೆಪಿ ಕಚೇರಿಗೆ ಕಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪೊಲೀಸರೊಂದಿಗೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳೂ ಸಹ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದೇ ಮಾದರಿಯ ಘಟನೆ ಕೇರಳದಲ್ಲೂ ನಡೆದಿದ್ದು, ತಿರುವನಂತಪುರಂ ಜಿಲ್ಲೆಯಲ್ಲಿ ಅನಾಮಿಕ ವ್ಯಕ್ತಿಗಳು ಪೆಟ್ರೋಲ್ ಬಾಂಬ್ ನ್ನು ಎಸೆದಿದ್ದಾರೆ. ಘಟನೆಯಲ್ಲಿ ಪೀಠೋಪಕರಣಗಳಿಗೆ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.