ಯುಎಲ್ಎಫ್ಎ ಬೇಡಿಕೆಗೆ ಶೀಘ್ರವೇ ಪರಿಹಾರ: ರಿಜಿಜು
ಮಾತುಕತೆಗೆ ಮುಕ್ತವಾಗಿರುವ ಯುಎಲ್ಎಫ್ಎ ಬಣದ ಬಹುತೇಕ ಬೇಡಿಕೆಗಳು ಪರಿಗಣನೆಗೆ ಅರ್ಹವಾಗಿದ್ದು, ಶೀಘ್ರವೇ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್
ಗುವಾಹಟಿ: ಮಾತುಕತೆಗೆ ಮುಕ್ತವಾಗಿರುವ ಯುಎಲ್ಎಫ್ಎ ಬಣದ ಬಹುತೇಕ ಬೇಡಿಕೆಗಳು ಪರಿಗಣನೆಗೆ ಅರ್ಹವಾಗಿದ್ದು, ಶೀಘ್ರವೇ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಉಲ್ಫಾ ಸಂಘಟನೆಯ ಅರಬಿಂದಾ ರಾಜ್ಖೋವಾ ಬಣದ ಬೇಡಿಕೆಗಳೊಂದಿಗೆ ಶಾಂತಿ ಮಾತುಕತೆಯ ಪ್ರಕ್ರಿಯೆ ಮುಂದುವರೆದಿದ್ದು, ಅವರ ಬಹುತೇಕ ಬೇಡಿಕೆಗಳು ಪರಿಗಣನೆಗೆ ಅರ್ಹವಾಗಿವೆ ಎಂದು ಮಾಧ್ಯಮಗಳಿಗೆ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ಕುರಿತು ವಿವರಣೆ ನೀಡಲು ನಿರಾಕರಿಸಿರುವ ಕಿರಣ್ ರಿಜಿಜು ಶೀಘ್ರವೇ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂಬುದನ್ನು ಹೇಳಲಷ್ಟೇ ಸಾಧ್ಯ ಎಂದಿದ್ದಾರೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಗದಿತ ಗಡುವು ನೀಡಲು ಕಿರಣ್ ರಿಜಿಜು ನಿರಾಕರಿಸಿದ್ದು, ಉಲ್ಫಾ ಸಂಘಟನೆಯ ಪ್ರಮುಖ ಬೇಡಿಕೆಯಾದ ಅಸ್ಸಾಂ ನ ಸಾರ್ವಭೌಮತೆ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ಒಂದು ವೇಳೆ ಸಾರ್ವಭೌಮತೆ ಬೇಕೆಂದು ಪಟ್ಟು ಹಿಡಿದು ಕುಳಿತರೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ರಿಜಿಜು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.