ದೇಶ

ಮಹಾರಾಷ್ಟ್ರದಲ್ಲಿ ಭಾರೀ ಮಳೆ, 16 ಮಂದಿ ಸಾವು

Lingaraj Badiger
ಮುಂಬೈ: ಮಹಾರಾಷ್ಟ್ರದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. 
ಮಹಾರಾಷ್ಟ್ರದ ಪಶ್ಚಿಮ ಕರಾವಳಿ ಭಾಗದಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಮುಂಬೈ ಸುತ್ತಮುತ್ತಲಿನ ಥಾಣೆ, ರಾಯಘಡ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದೆ.
ವಿದರ್ಭದ ಪೂರ್ವ ವಲಯದ ಜಿಲ್ಲೆಯಾದ ಗಡ್‌ಚಿರೋಲಿಯಲ್ಲಿ ಸುರಿದ ಮಳೆಗೆ 4 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.
ಮರಾಠವಾಡದ ಲಾತೂರ್‌ನಲ್ಲಿ ಇಬ್ಬರು, ನಾಸಿಕ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅಹ್ಮದಾಬಾದ್‌ ಜಿಲ್ಲೆಯ ನೇವಸದಲ್ಲಿ ಶಾಲಾ ಬಾಲಕ ಚರಂಡಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
SCROLL FOR NEXT