ಪಣಜಿ: ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನೆಯ ಮುಖ್ಯಸ್ಥ ಶಿವಪ್ರಸಾದ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೋವಾದ ಶಿವಸೇನೆಯ ಮುಖ್ಯಸ್ಥ ಶಿವಪ್ರಸಾದ್ ಗೋವಾದ ಜನ ತುಂಬಾ ದೇಶಭಕ್ತರು. ಇಲ್ಲಿನ ತುಂಬಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ರಾಷ್ಟ್ರಗೀತೆಯನ್ನು ಹಾಡುತ್ತಾರೆ. ಆದರೆ ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡುವುದು ಹೇಗೆ ಎನ್ನುವುದೇ ಗೊತ್ತಿಲ್ಲ. ಇನ್ನು ನಮ್ಮ ರಾಷ್ಟ್ರಪಿತ ಯಾರು ಎಂಬುದು ಅವರಿಗೆ ಮೊದಲೇ ಗೊತ್ತಿಲ್ಲ ಎಂದೆಲ್ಲಾ ಹೇಳಿದ್ದಾರೆ.
ಮಹಾದಾಯಿ ನೀರು ಹಂಚಿಕೆಯ ಸಂಬಂಧಿಸಿದಂತೆ ಗೋವಾ-ಕರ್ನಾಟಕ ನಡುವಿನ ವಿವಾದದ ಹಿನ್ನೆಲೆಯಲ್ಲಿ ಶಿವಪ್ರಸಾದ್ ಈ ಮಾತುಗಳನ್ನು ಹೇಳಿದ್ದಾರೆ.